Focus News
Trending

ಹಗಲು-ರಾತ್ರಿ ಜೀವಭಯದಲ್ಲೇ ಕಾಲ ಕಳೆಯುವ ಪರಿಸ್ಥಿತಿ: ಇದು ಈ ಊರಿನವರ ದುಸ್ಥಿತಿ

ಹೊನ್ನಾವರ: ತಾಲೂಕಿನ ಕರ್ಕಿಯ ತೊಪ್ಪಲಕೇರಿ, ಹೆಗಡೆಹಿತ್ಲ ದಂಡೆಗೆ ಹಾಕಿರುವ ತಡೆಗೋಡೆ ಸಂಪೂರ್ಣ ನಾಶಗೊಂಡಿದ್ದು, ತಡೆಗೋಡೆ ನಿರ್ಮಿಸಿ ಶಾಶ್ವತ ಪರಿಹಾರ ದೊರಕಿಸಿ ಕೊಡುವ ಬಗ್ಗೆ ಅಲ್ಲಿನ ಗ್ರಾಮಸ್ಥರು ಮೀನುಗಾರಿಕೆ, ಸಚಿವರಾದ ಮಂಕಾಳ ವೈದ್ಯರಿಗೆ ಮನವಿ ಸಲ್ಲಿಸಿದರು.

ವಿದ್ಯಾರ್ಥಿಗಳು, ಪಾಲಕರ ಗಮನಕ್ಕೆ: ಇನ್ಮುಂದೆ ಶನಿವಾರ ಪೂರ್ಣದಿನ ಶಾಲೆ

ಈ ಭಾಗದ ಜನರು ಹಗಲು-ರಾತ್ರಿ ಜೀವಭಯದಲ್ಲೇ ಕಾಲ ಕಳೆಯುವ ಪರಿಸ್ಥಿತಿ ಬಂದೊದಗಿದೆ. ತಡಗೋಡೆ ಈಗ ಸಂಪೂರ್ಣ ನೆಲಸಮವಾಗಿದೆ. ಸದ್ಯದಲ್ಲಿಯೇ ಮನೆ, ಭೂಮಿ ಕಳೆದುಕೊಂಡು ನಿರ್ಗತಿಕರಾಗಬೇಕಾದ ಪರಿಸ್ಥಿತಿ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಕರ್ಕಿ ಗ್ರಾಮ ಪಂಚಾಯತ ಸದಸ್ಯ ಹರಿಶ್ಚಂದ್ರ ನಾಯ್ಕ, ಸ್ಥಳೀಯರಾದ ಸಣ್ತಮ್ಮ ನಾಯ್ಕ ಮಾತನಾಡಿ, ಸಚಿವ ಮಂಕಾಳ ವೈದ್ಯರವರಿಗೆ ಹಿಂದಿನ ಜನಸ್ಪಂದನ ಸಭೆಯಲ್ಲಿ ಮನವಿ ನೀಡಿದಾಗ ಇದರ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

ಈ ಬಾರಿ ಮತ್ತೆ ಜನಸ್ಪಂದನ ಸಭೆಗೆ ಆಗಮಿಸಿದಾಗ ಪುನಃ ಮನವಿ ನೀಡಿದೆವು ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮಪಂಚಾಯತ ಸದಸ್ಯರಾದ ಕಮಲಾಕರ ಮುಕ್ರಿ, ಸ್ಥಳೀಯರಾದ ಸುಮತಿ ನಾಯ್ಕ, ಸುನೀಲ ವರ್ಗೀಸ್, ಮೋಹನ ನಾಯ್ಕ, ಗಜಾನನ ನಾಯ್ಕ, ಶಂಕರ ನಾಯ್ಕ, ಮುಂತಾದವರು ಇದ್ದರು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Back to top button