Follow Us On

WhatsApp Group
Important
Trending

ವೈದ್ಯರ ಮುಷ್ಕರ ಹಿನ್ನಲೆ ನಾಳೆ ಆರೋಗ್ಯ ಸೇವೆ ಬಯಸಿ ಬರುವವರಿಗಾಗಿ ಮಾಹಿತಿ

ಕುಮಟಾ: ಕೊಲ್ಕತ್ತಾದಲ್ಲಿ ಇತ್ತೀಚಿಗೆ ನಡೆದ ಮೆಡಿಕಲ್ ಸ್ನಾತಕೋತ್ತರ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ದೇಶಾದ್ಯಂತ ಹೋರಾಟ ನಡೆಯುತ್ತಿದೆ. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ , ದೇಶವ್ಯಾಪಿ ಮುಷ್ಕರದ ಕರೆಯ ಮೇರೆಗೆ ಕುಮಟಾದಲ್ಲಿ ನಾಳೆ ಮುಂಜಾನೆ 6 ಗಂಟೆಯಿoದ ರವಿವಾರ ಮುಂಜಾನೆ 6 ಗಂಟೆಯವರೆಗೆ ಎಲ್ಲಾ ಖಾಸಗಿ ಆಸ್ಪತ್ರೆ ಹಾಗೂ ದಂತ ಚಿಕಿತ್ಸಾ ಕೇಂದ್ರದಲ್ಲಿ ತುರ್ತು ಸೇವೆ ಮಾತ್ರ ಲಭ್ಯವಿರುತ್ತದೆ. ಯಾವುದೇ ಓ.ಪಿ.ಡಿ ಮತ್ತು ಶಸ್ತ್ರಚಿಕಿತ್ಸೆ ನಡೆಸುವುದಿಲ್ಲ. ಸರ್ಕಾರಿ ಆಸ್ಪತ್ರೆಯ ವೈದ್ಯರು ಕೈಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿ ಸೇವೆ ಸಲ್ಲಿಸಲಿದ್ದಾರೆ ಎಂದು ತಾಲೂಕಾ ಐ.ಎಂ.ಎ ಘಟಕದ ಅಧ್ಯಕ್ಷರಾದ ಡಾ. ವಿಶ್ವಾಸ್ ನಾಯ್ಕ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ. ಅಲ್ಲದೆ, ಹೊನ್ನಾವರ ತಾಲೂಕಿನಲ್ಲೂ ತುರ್ತು ಸೇವೆ ಮಾತ್ರ ಇರಲಿದೆ ಎಂದು ಡಾ. ವಿಶಾಲ್ ಹಾಗೂ ಕಾರ್ಯದರ್ಶಿ ವಿನಾಯಕ ರಾಯ್ಕರ್ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button