Follow Us On

WhatsApp Group
Important
Trending

ನನ್ನ ಮಗನನ್ನು ಹುಡುಕಿಕೊಡಿ: ತಾಯಿಯ ದೂರಿನಲ್ಲಿ ಏನಿದೆ?

ಕುಮಟಾ: ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ಮನೆಯಿಂದ ಹೊರಗಡೆ ಹೋದವನು ಮನೆಗೆ ಮರಳಿ ಬಾರದೆ ನಾಪತ್ತೆಯಾಗಿದ್ದಾನೆ. ತಾಲೂಕಿನ ಕಾಗಲ್ ಹಿಣಿ ಗ್ರಾಮದಲ್ಲಿ ನಡೆದಿದ್ದು, ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಂಭತ್ತನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಗಲ್ ಹಿಣಿ ಗ್ರಾಮದ ಶರೀಫಾ ಇಸ್ಮಾಯಿಲ್ ನದಿಭಾಗ ಅವರ ಪುತ್ರ ಅಬೂಬಕರ ಇಮಾದ್ ಇಸ್ಮಾಯಿಲ್ ನದಿಭಾಗ ಕಾಣೆಯಾದ ಅಪ್ರಾಪ್ತ ಬಾಲಕ.

Hescom Recruitment 2024: ಹೆಸ್ಕಾಂ ನೇಮಕಾತಿ: 338 ಹುದ್ದೆಗಳು: ಪದವಿ & ಡಿಪ್ಲೋಮಾ ಆದವರು ಅರ್ಜಿ ಸಲ್ಲಿಸಿ

ಈತ ಆಗಸ್ಟ್ 17 ರಂದು 3 ಗಂಟೆಗೆ ಮನೆಯಿಂದ ಹೊರಗೆ ಹೋದವನು ಈವರೆಗೂ ಮರಳಿ ಮನೆಗೆ ಬಂದಿಲ್ಲ. ಮನೆಯ ಕುಟುಂಬದವರು, ಪಾಲಕರು ಹುಡುಕಾಡಿದರೂ ಎಲ್ಲಿಯೂ ಈತನ ಪತ್ತೆಯಾಗದೇ ಇರುವುದರಿಂದ ಮನೆಯವರು ತೀವ್ರ ಆತಂಕದಲ್ಲಿದ್ದಾರೆ. ಮನೆಗೂ ಬರದೇ ಎಲ್ಲಿಯೋ ಹೋಗಿರಬಹುದು ಅಥವಾ ಅವನಿಗೆ ಯಾರಾದರು ಅಪಹರಿಸಿಕೊಂಡು ಹೋಗಿರುಬಹುದು. ನನ್ನ ಮಗನನ್ನು ತಾವು ಹುಡುಕಿ ಕೊಡಬೇಕು ಎಂದು ಅಪ್ರಾಪ್ತ ಬಾಲಕನ ತಾಯಿ ಶರೀಫಾ ಕುಮಟಾ ಠಾಣೆಯಲ್ಲಿ ಪ್ರಕರ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡೊದ್ದಾರೆ.

ವಿಸ್ಮಯ ನ್ಯೂಸ್, ನಾಗೇಶ್ ದಿವಗಿ , ಕುಮಟಾ

Back to top button