Important
Trending

ಪೆಂಡೋಲಮ್ ಆತ್ಮದ ಶಕ್ತಿ : ಇದರ ಮೂಲಕ ನಿಖರ ಭವಿಷ್ಯ ಸಾಧ್ಯ: ಸ್ವಾಮೀಜಿ

ಅಂಕೋಲಾ: ಗಂಗಾವಳಿ ನದಿಯಲ್ಲಿ ಮಣ್ಣು ಶೇಖರಣೆಯಾದ ಸ್ಥಳಕ್ಕೆ ತೆರಳಿ ಪೆಂಡೋಲಮ್ ಸಾಧನ ಮತ್ತು ನಾಪತ್ತೆಯಾದವರ ಕುಟುಂಬಸ್ಥರ ಮಾಹಿತಿಯ ಮೂಲಕ ನಾಪತ್ತೆಯಾದವರನ್ನು ಪತ್ತೆ ಹಚ್ಚುವ ಕಾರ್ಯಕ್ಕಾಗಿ ಬಂದಿದ್ದು, ಜಿಲ್ಲಾಡಳಿತ ಅವಕಾಶ ನೀಡದ ಹಿನ್ನೆಲೆ ಅಸಮಾಧಾನವಾಗಿದೆ ಎಂದು ಉಡುಪಿ ಮೂಲದ ಈಶ್ವರ ಸಾಯಿ ಸ್ವಾಮೀಜಿ ಹೇಳಿದರು.

ಶಿರೂರು ದುರಂತದ ಸ್ಥಳಕ್ಕೆ ಭೇಟಿ ನೀಡಿದ ಅವರು ಅವಕಾಶ ಸಿಗದ ಹಿನ್ನಲೆ ಮಾಧ್ಯಮದೊಂದಿಗೆ ಮಾತನಾಡಿದರು. ಈಶ್ವರ ಮಲ್ಪೆ ಕಾರ್ಯಾಚರಣೆಗೆ ಬೆಂಬಲ ನೀಡುವ ಸಲುವಾಗಿ ಬಂದಿದ್ದೆ. ಮುಂದೆ ಅವಕಾಶ ನೀಡಿದರೆ ಸಹಾಯ ಮಾಡಲು ಸಿದ್ಧ. ಹಿಂದೆ ಭೇಟಿ ನೀಡಿದಾಗ ಹೇಳಿದ ರೀತಿಯಲ್ಲಿ ಕುರುಹುಗಳ ಪತ್ತೆಯಾಗಿವೆ ಎಂದರು. ಜಗನ್ನಾಥ ಕುಟುಂಬದ ಹೆಣ್ಣು ಮಕ್ಕಳ ಅಳಿಲು ಕೇಳಿ ಬಂದಿದ್ದೇನೆ. ವಿಶ್ವ ಮಟ್ಟದಲ್ಲಿ ಪೆಂಡೋಲಮ್ ಸಾಧನ ಬಳಕೆ ಇದ್ದು ನಮಲ್ಲಿ ಮಾಹಿತಿಯ ಕೊರತೆ ಇದೆ. ನೀರಿನಲ್ಲಿ ಮಣ್ಣು ಬಂಡೆಗಲ್ಲು ಮರಗಳು ಬಿದ್ದ ಕಾರಣ ಕಾರ್ಯಾಚರಣೆ ಕಷ್ಟವಾಗಿದೆ ಎಂದರು.

ಈ ಹಿಂದೆ ಮಲ್ಪೆಯಲ್ಲಿ ನಾಪತ್ತೆಯಾದ ಬೋಟ್, ಚಂದ್ರಯಾನ, ಕೋವಿಡ್ ಮಾರಣಾಂತಿಕ ಕಾಯಿಲೆ ಹೀಗೆ ಹಲವು ವಿಷಯಗಳಲ್ಲಿ ನಾನು ನುಡಿದ ಭವಿಷ್ಯ ನಿಜವಾಗಿದೆ. ಪ್ರಚಾರಕ್ಕಾಗಿ ಬಂದಿಲ್ಲ, ಪ್ರಾಮಾಣಿಕವಾಗಿ ಕಾರ್ಯಾಚರಣೆಗೆ ನೆರವು ನೀಡುತ್ತೇವೆ. ಪೆಂಡೋಲಮ್ ಸಾಧನ ಆತ್ಮಶಕ್ತಿಗೆ ಒಲಿದು ಬರುತ್ತದೆ. ಈ ಹಿಂದೆ ನಾನು ದುರಂತದಲ್ಲಿ ನಾಪತ್ತೆಯಾದವರ ಸಂಖ್ಯೆ ಇನ್ನೂ ಹೆಚ್ಚಿರುವ ಕುರಿತು ಹೇಳಿದ್ದೆ. ಲಾರಿಯ ಮೇಲೆ ಬಂದವರೋ ಅಪರಿಚಿತರು ಇರಬಹುದು ಎಂದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button