Big News
Trending

Independence Day: ಸ್ವಾತಂತ್ರ‍್ಯ ದಿನಾಚರಣೆಯ ದಿನ ಪ್ಲಾಸ್ಟಿಕ್ ಧ್ವಜ ನಿಷೇಧ

ಕಾರವಾರ: ಭಾರತ ಸರ್ಕಾರದ ಗೃಹಮಂತ್ರಾಲಯವು ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ರಾಷ್ಟ್ರೀಯ ಗೌರವ ಕಾಯ್ದೆ, 1971 ಮತ್ತು ಭಾರತ ದ್ವಜ ಸಂಹಿತೆ 2002ರಡಿ ಎಲ್ಲಾ ಸರಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಹಾಗು ಸಾರ್ವಜನಿಕರು ಪ್ರಮುಖ ರಾಷ್ಟ್ರೀಯ ಸಾಂಸ್ಕೃತಿಕ ಮತ್ತು ಕ್ರೀಡಾಕೂಟಗಳ ಸಂದರ್ಭಗಳಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ಧ್ವಜಗಳನ್ನು ಬಳಸದಂತೆ ಸೂಚಿಸಿದೆ. ಆದ ಕಾರಣ ಸ್ವಾತಂತ್ರ‍್ಯ ದಿನಚಾರಣೆಯ ದಿನ ನಿಷೇಧಿತ ಪ್ಲಾಸ್ಟಿಕ್ ಧ್ವಜಗಳನ್ನು ಬಳಸದಂತೆ ಕಟ್ಟನಿಟ್ಟಾಗಿ ಅನುಸರಿಸಬೇಕೆಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button