ಶಾಂತಿನಿಕೇತನ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮುದ್ದು ಕೃಷ್ಣ, ಮುದ್ದು ರಾಧೆ ಸ್ಪರ್ಧೆ : ಗಮನ ಸೆಳೆದ 50 ಕ್ಕೂ ಹೆಚ್ಚು ಪುಟಾಣಿ ಮಕ್ಕಳ ವೇಷ ಭೂಷಣ
ಅಂಕೋಲಾ: ಪಟ್ಟಣದ ಶಾಂತಿನಿಕೇತನ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ವರ್ಷಂ ಪ್ರತಿಯಂತೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದು ಕೃಷ್ಣ ಮುದ್ದು ರಾಧೆ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಹಿರಿ – ಕಿರಿಯ ಹಾಗೂ ಇತರೆ ಸ್ಪರ್ಧಾಳುಗಳು ಸೇರಿ 50ಕ್ಕೂ ಹೆಚ್ಚು ಪುಟಾಣಿ ಮಕ್ಕಳು ಕೃಷ್ಣ ಮತ್ತು ರಾಧೆಯ ವೇಷದಲ್ಲಿ ಮಿಂಚಿದರು. ಪುಟಾಣಿಗಳ ವೇಷ ಭೂಷಣ ನೆರೆದವರ ಕಣ್ಮನ ಸೆಳೆಯಿತು. ಶಾಂತಿನಿಕೇತನ ಶಾಲೆ ಮತ್ತು ತಾಲೂಕಿನ ಇತರೆ ಪುಟಾಣಿಗಳಿಗಾಗಿ ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಲಾಗಿತ್ತು.
ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಹೊರಗಿನ ಮಕ್ಕಳ ಕಿರಿಯ ವಿಭಾಗದಲ್ಲಿ ಶೃದ್ಧಾ (ಪ್ರಥಮ), ರಿತೀಶ್ (ದ್ವಿತೀಯ),ಸಂಚೀತ (ತೃತೀಯ). *ಹಿರಿಯ ವಿಭಾಗ* ದಲ್ಲಿ ಪ್ರಣವೀರ್ (ಪ್ರಥಮ ), ಅದ್ವಿಕಾ( ದ್ವಿತೀಯ), ಪ್ರಿಶಾ ( ತೃತೀಯ ). ಶಾಂತಿನಿಕೇತನ ಶಾಲಾ ಮಕ್ಕಳ *ಕಿರಿಯ ವಿಭಾಗ* ದಲ್ಲಿ ವಾಸವ( ಪ್ರಥಮ),ಅನಿಕೇತ (ದ್ವಿತೀಯ), ಕರ್ಣಿಕ (ತೃತೀಯ), ಹಿರಿಯ ವಿಭಾಗ ದಲ್ಲಿ ಶ್ರೀಯಾ (ಪ್ರಥಮ), ಆರುಷಿ (ದ್ವಿತೀಯ),ಅರ್ನಿಕ (ತೃತೀಯ) ಬಹುಮಾನ ಪಡೆದು ಕೊಂಡರು.
ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ಪುನೀತ ನಾಯ್ಕ, ಭಾಗೀರಥೀ ಹೆಗಡೆಕಟ್ಟೆ, ನಿಶಾ ಕೇಣಿ, ಶಾಂತಿ ನಾಯಕ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಶಾಂತಿನಿಕೇತನ ಸಂಸ್ಥೆಯ ನಿರ್ದೇಶಕ ಡಾ.ಸಂಜು. ಟಿ. ನಾಯಕ, ಅಧ್ಯಕ್ಷರಾದ ಟಿ.ಬಿ.ನಾಯಕ, ಕಾರ್ಯದರ್ಶಿಯಾದ ಶಾಂತಿ. ಬಿ. ನಾಯಕ ಉಪಸ್ಥಿತರಿದ್ದರು.ಶಿಕ್ಷಕ ವೃಂದವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು ಸಿಬ್ಬಂದಿ ವರ್ಗದವರು,ವಿದ್ಯಾರ್ಥಿ ಪಾಲಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.