Follow Us On

WhatsApp Group
Important
Trending

ಸೂರ್ಯನಾರಾಯಣ ಹೆಗಡೆ ಕಡತೋಕಾ ಇನ್ನಿಲ್ಲ

ಕುಮಟಾ: ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ಕಡತೋಕಾದ ಸೂರ್ಯನಾರಾಯಣ ಹೆಗಡೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ನಿಧನರಾಗಿದ್ದಾರೆ. ಅತ್ಯಂತ ಕ್ರೀಯಾಶೀಲ ವ್ಯಕ್ತಿತ್ವದಿಂದ ಕಾರ್ಯಕ್ರಮದ ಸಂಘಟನೆ-ಸoಯೋಜನೆಯಲ್ಲೂ ಸೈ ಎನಿಸಿಕೊಂಡಿದ್ದ ಸೂರ್ಯನಾರಾಯಣ ಹೆಗಡೆ ತಮ್ಮ ಆಪ್ತ ವಲಯದಲ್ಲಿ ಸೂರಣ್ಣ ಎಂದೇ ಖ್ಯಾತಿ ಪಡೆದಿದ್ದರು.

ನಾವು ನಮ್ಮಿಷ್ಟ ಗ್ರೂಪ್ ಮೂಲಕ ಸದಾ ಚಟುವಟಿಕೆಯಿಂದ ಇದ್ದು, ನಾವು ನಮ್ಮಿಷ್ಟ ಗ್ರೂಪ್‌ನಿಂದ ಹಲವು ಸಮ್ಮೇಳವನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಿದ್ದರು. ದೇವರು ಅವರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ನೀಡಲಿ ಹಾಗು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.

ವಿಸ್ಮಯ ನ್ಯೂಸ್, ಕುಮಟಾ

Back to top button