Important
Trending

ಶಿರಸಿಗೆ ಉಗ್ರರ ನಂಟು ಎಂಬ ವೈರಲ್ ಸುದ್ದಿಯ ಅಸಲಿಯತ್ತೇನು?

ಜಿಲ್ಲಾ ಪೊಲೀಸರು ಹೇಳಿದ್ದೇನು?
ಇಂಥ ಸುದ್ದಿಯನ್ನು ನಂಬಬೇಡಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯೂ JMB ಉಗ್ರರ ಅಡಗುತಾಣವಾಯ್ತು, ಶಾಂತಿಯ ನಗರಿ ಶಿರಸಿ JMB ಉಗ್ರರು ಕರಿನೆರಳು? ಹೀಗೆ ಇಂಥ ಹಲವು ಸುದ್ದಿಗಳು ಇಂದು ಎಲ್ಲೆಡೆ ಹರಿದಾಡುತ್ತಿದ್ದವು. ಈಗ ಇದು ಇದು ಸುಳ್ಳು ಸುದ್ದಿಯಾಗಿದೆ ಎಂಬುದು ಬಹಿರಂಗವಾಗಿದೆ.

ಶಿರಸಿ ನಗರದಲ್ಲಿ ವಾರದ ಹಿಂದೆ ಶೋಧ ಕಾರ್ಯ ನಡೆಸಿರುವ ಎಸ್‍ಐಎಸ್‍ಡಿ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆಯು ಕೆಲವರನ್ನು ವಶಕ್ಕೆ ಪಡೆದು ವಿಚಾರಿಸಿ ಬಿಡುಗಡೆ ಮಾಡಿದೆ. ಬನವಾಸಿಯ ಯುವಕನೊಬ್ಬನಿಂದ‌ ಒಂಬತ್ತು ಸಿಮ್ ವಶಪಡಿಸಿಕೊಳ್ಳಲಾಗಿದ್ದು, ಇದನ್ನು ಉಗ್ರ ಸಂಘಟನೆಗೆ ಬಳಸಿಕೊಳ್ಳಲಾಗಿತ್ತು ಎಂಬೆಲ್ಲ ಸುದ್ದಿ ಎಲ್ಲೆಡೆ ಹರಿದಾಡಿದ್ದವು.

ಇದು ಸುಳ್ಳು‌ ಸುದ್ದಿ. ಈ ತರಹದ ಯಾವುದೇ ಮಾಹಿತಿಗಳಿದ್ದಲ್ಲಿ ಜಿಲ್ಲಾ ಪೋಲೀಸ್ ಕಛೇರಿಯ ಪತ್ರಿಕಾ ಪ್ರಕಟಣೆ ಮೂಲಕ ನೀಡಲಾಗುವುದು. ಈ ರೀತಿಯ ಸುಳ್ಳು ವದಂತಿ ಸೃಷ್ಟಿಸಿ ಹರಿಬಿಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೋಲೀಸ್ ಕಛೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆ ನೀಡಿ ಮಾಹಿತಿ ನೀಡಿದ್ದಾರೆ.

ಬ್ಯೂರೋ ರಿಪೋರ್ಟ್ , ವಿಸ್ಮಯ ನ್ಯೂಸ್

Related Articles

Back to top button