Follow Us On

WhatsApp Group
Big News
Trending

ಬೆಂಗಳೂರಿನಿಂದ ಬೆಳಗಾವಿಗೆ ವರ್ಗಾವಣೆಗೊಂಡ IRS ಅಧಿಕಾರಿ: ಶುಭ ಹಾರೈಕೆ

ಅಂಕೋಲಾ ಮೂಲದ ಯುವ ಅಧಿಕಾರಿಗೆ ಗೆಳೆಯರ ಬಳಗದಿಂದ ಆತ್ಮೀಯ ಬೀಳ್ಕೊಡುಗೆ

ಬೆಂಗಳೂರು : ನಾಡವರ ಗೆಳೆಯರ ಬಳಗ- ಬೆಂಗಳೂರು ಇವರು BRV Club ನಲ್ಲಿ ಆಯೋಜಿಸಿದ್ದ ಸರಳ ಸುಂದರ ಕಾರ್ಯಕ್ರಮದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ GST ವಿಭಾಗದಲ್ಲಿ ಉಪ ಆಯುಕ್ತರಾಗಿ ದಕ್ಷ ರೀತಿಯಲ್ಲಿ ಕಾರ್ಯನಿರ್ವಹಿಸಿ ಈಗ ಬೆಳಗಾವಿ ವಲಯಕ್ಕೆ ವರ್ಗವಾಗಿ ತೆರಳುತ್ತಿರುವ IRS ಅಧಿಕಾರಿ, ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಮೂಲದ, ಪ್ರಮೋದ ನಾಯಕ ಸೂರ್ವೆ ಇವರಿಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು, ಅವರ ಧರ್ಮ ಪತ್ನಿ ಸೂರಜ ನಾಯಕ ಸೇರಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಪ್ರಮೋದ ನಾಯಕ ಅವರ ಸರಳ ನಡೆ-ನುಡಿ, ಪರೋಪಕಾರಿ ವ್ಯಕ್ತಿತ್ವ, ಎಲ್ಲಿಯೂ ಅಧಿಕಾರದ ಅಹಂ ತೋರದೇ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುವ ಅವರ ದೊಡ್ಡ ಗುಣ – ವಿಶೇಷತೆಗಳ ಬಗ್ಗೆ ಹಲವರು ಶ್ಲಾಘಿಸಿದರು.

ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಮೋದ ನಾಯಕ, ಬೆಂಗಳೂರಿನಲ್ಲಿಯ ತಮ್ಮ ಸೇವಾನುಭವ ನೆನಪಿಸಿಕೊಂಡು, ಸಹಕರಿಸಿದ ಸರ್ವರನ್ನು ಸ್ಮರಿಸಿ, ಮುಂದೆಯೂ ಸಮಾಜದ ವಿಧಾಯಕ ಕಾರ್ಯದಲ್ಲಿ ತನ್ನ ಕೈಲಾದ ಸೇವೆ ಸಹಕಾರ ನೀಡುವುದಾಗಿ ತಿಳಿಸಿದರು. ಸಮಾಜದ ಹಿರಿ-ಕಿರಿಯ ಗೆಳೆಯರ ಬಳಗದವರು ಹಾಗೂ ಇತರರು ,ಪ್ರಮೋದ ನಾಯಕ ಅವರ ಮುಂದಿನ ಸೇವಾವಧಿಗೆ ಶುಭ ಹಾರೈಸಿ ಬೀಳ್ಕೊಟ್ಟರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button