Follow Us On

WhatsApp Group
Important
Trending

ಹೆದ್ದಾರಿ ಪಕ್ಕದಲ್ಲಿರುವ ಅನಧಿಕೃತ ಮನೆ ಮತ್ತು ಅಂಗಡಿ ಪರಿಶೀಲಿಸಿ: ತಕ್ಷಣ ತೆರವುಗೊಳಿಸಲು ನೋಟೀಸ್ ಜಾರಿ

ಕಾರವಾರ: ಮರ ಗಿಡಗಳನ್ನು ಕಡಿದು, ಅರಣ್ಯ ಪ್ರದೇಶಗಳನ್ನು ತೆರವುಗೊಳಿಸಿ ಹೋಮ್ ಸ್ಟೇ ಮತ್ತು ರಾಷ್ಟಿçÃಯ ಹೆದ್ದಾರಿ, ರಾಜ್ಯ ಹೆದ್ದಾರಿಯ ಪಕ್ಕ ಚಿಕ್ಕಪುಟ್ಟ ಅಂಗಡಿಗಳನ್ನಿಟ್ಟು ಹಲವರು ವ್ಯಾಪಾರ ವಹಿವಾಟನ್ನು ಅನಧಿಕೃತವಾಗಿ ಮಾಡಿದರೂ ಸಹ ಈವರೆಗೆ ಯಾವುದೇ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿರಲಿಲ್ಲ.

ಆದರೆ ಶಿರೂರು ಗುಡ್ಡ ಕುಸಿತದಿಂದ ಹೆದ್ದಾರಿಯ ಪಕ್ಕದಲ್ಲಿರುವ ಅಂಗಡಿಯಲ್ಲಿ 11 ಜನರ ಸಾವು ಮತ್ತು ವೈನಾಡ್ ದುರಂತ ಆದಾಗಿನಿಂದ ಎಚ್ಚೆತ್ತುಕೊಂಡ ಸರಕಾರ ಮತ್ತು ಇಲಾಖೆಗಳು ಹಾಗೂ ಅಧಿಕಾರಿಗಳು ಇಂತಹ ಅನಧಿಕೃತವಾಗಿರುವುದನ್ನು ತಕ್ಷಣ ತೆರವುಗೊಳಿಸಿ ಕ್ರಮ ತೆಗೆದುಕೊಂಡು ವರದಿಯನ್ನು ಸಹಾಯಕ ಆಯುಕ್ತರ ಕಾರ್ಯಾಲಯಕ್ಕೆ ಸಲ್ಲಿಸಬೇಕೆಂದು ಸಹಾಯಕ ಆಯುಕ್ತರು ಆದೇಶಿಸಿದ ಹಿನ್ನೆಲೆಯಲ್ಲಿ ತಹಶೀಲ್ದಾರರು ಸ್ಥಳೀಯ ಪುರಸಭೆ ಮತ್ತು ಗ್ರಾ.ಪಂ, ತಾ.ಪಂ.ಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಕುಮಟಾ ಉಪವಿಭಾಗದ ಸಹಾಯಕ ಆಯುಕ್ತರು 2 ಜುಲೈ 2024ಕ್ಕೆ ಈ ನಿರ್ದೇಶನ ನೀಡಿದ್ದು ತಾಲೂಕಿನ ವ್ಯಾಪ್ತಿ ಪ್ರದೇಶಕ್ಕೆ ಅನುಗುಣವಾಗಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಗುಡ್ಡಗಾಡು ಪ್ರದೇಶ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅನಧಿಕೃತ ಮನೆ ಮತ್ತು ಅಂಗಡಿಗಳನ್ನು ಪರಿಶೀಲಿಸಿ ತಕ್ಷಣವಾಗಿ ತೆರವುಗೊಳಿಸುವ ಕಾರ್ಯವನ್ನು ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತು ನಗರ ಪ್ರದೇಶಕ್ಕೆ ಅನುಗುಣವಾಗಿ ತೆಗೆದುಕೊಂಡ ಕ್ರಮದ ವರದಿಯನ್ನು ಸಲ್ಲಿಸಲು ತಿಳಿಸಲಾಗಿದೆ.

2015ರ ನಂತರದ ಅರಣ್ಯ ಅತಿಕ್ರಮಣ ತೆರವುಗೊಳಿಸಲು ಅರಣ್ಯ ಸಚಿವರು ಕ್ರಮಕ್ಕೆ ಮುಂದಾಗುವoತೆ ಅಧಿಕಾರಿಗಳಿಗೆ ಸೂಚಿಸಿದ್ದು ಈ ಹಿನ್ನೆಲೆಯಲ್ಲಿ ಅನಧಿಕೃತವಾಗಿರುವ ಅಂಗಡಿ, ಮನೆ, ಜಾಗ ಎಲ್ಲದಕ್ಕೂ ಕುತ್ತು ಬರಲಿದೆಯೇ ಎನ್ನುವಂತಾಗಿದೆ. ಹೆಸ್ಕಾಂ ಇಲಾಖೆಯು ಸಹ ಕೆಲವು ಅಂಗಡಿಗಳಿಗೆ ವಿದ್ಯುತ್ ಸಂಪರ್ಕ ನೀಡಿದೆ. ಈ ಆದೇಶ ಹೊರಬೀಳುತ್ತಿದ್ದಂತೆ ಹೆಸ್ಕಾಂ ಇಲಾಖೆ ಸಹ ಅನಧಿಕೃತ ಅಂಗಡಿಗಳಲ್ಲಿ ಯಾವ ದಾಖಲಾತಿ ನೀಡಿ ವಿದ್ಯುತ್ ಪಡೆದಿದ್ದರೂ ಎನ್ನುವುದನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ. ಹಲವು ವರ್ಷಗಳಿಂದ ಕೆಲವರು ರಸ್ತೆಯ ಪಕ್ಕದಲ್ಲಿ ಅಂಗಡಿಗಳನ್ನು ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಈಗ ಅಂಗಡಿಗಳನ್ನು ತೆರವುಗೊಳಿಸಲು ಆದೇಶಿಸಿರುವುದರಿಂದ ಹಲವರ ಬದುಕು ಮೂರಾಬಟ್ಟೆಯಾಗಲಿದೆ.

ಬ್ಯೂರೋ ರಿಪೊರ್ಟ್, ವಿಸ್ಮಯ ನ್ಯೂಸ್

Back to top button