Follow Us On

WhatsApp Group
Big News
Trending

ಕಚ್ಚಿದ ಹಾವನ್ನೇ ಪ್ಲಾಸ್ಟಿಕ್ ಕವರ್​​ನಲ್ಲಿ ಕಟ್ಟಿಕೊಂಡು ಆಸ್ಪತ್ರೆಗೆ ಬಂದ ವೃದ್ಧ!

ವೈದ್ಯರಿಗೆ ಹಾವು ತೋರಿಸಲು ಈ ಸಾಹಸ
ಸೊಪ್ಪು ತರಲು ಹೋಗಿದ್ದ ವೇಳೆ‌ ಕಚ್ಚಿದ ಹಾವು

ಅಂಕೋಲಾ: ತನಗೆ ಕಚ್ಚಿದ ಹಾವನ್ನೇ ಪ್ಲಾಸ್ಟಿಕ್ ಕವರ್​​ನಲ್ಲಿ ಕಟ್ಟಿಕೊಂಡು ಆಸ್ಪತ್ರೆಗೆ ಬಂದ ವೃದ್ಧನನ್ನು ನೋಡಿ ಅಲ್ಲಿದ್ದವರೆಲ್ಲರೂ ಅಚ್ಚರಿಗೊಂಡಿದ್ದರು. ಹೌದು ಈ ಘಟನೆ‌ ನಡೆದಿರೋದು ಅಂಕೋಲಾ ತಾಲೂಕಿನ ಅಂಬಾರ ಕೊಡ್ಲದಲ್ಲಿ.

ತನಗೆ ಕಚ್ಚಿದ ಹಾವನ್ನು ಜೇಬಲ್ಲಿಟ್ಟುಕೊಂಡು ಬಂದ ವೃದ್ಧ ಅಂಕೋಲಾ ತಾಲೂಕಿನ ಅಂಬಾರಕೊಡ್ಲಿನ ಬಲೀಂದ್ರ ಗೌಡ ಎಂದು ತಿಳಿದು ಬಂದಿದೆ. ಈತ ಕೊಟ್ಟಿಗೆಗೆ ಸೊಪ್ಪು ತರಲು ತೆರಳಿದ್ದ ವೇಳೆ ಹಾವು ಕಚ್ಚಿದೆ.

ಈ ವೇಳೆ ಕೂಡಲೇ ಹಾವನ್ನು ಹಿಡಿದು ಕವರ್ ನಲ್ಲಿ ತುಂಬಿ ಅಂಕೋಲಾ ಆಸ್ಪತ್ರೆಗೆ ಬಂದಿದ್ದಾರೆ. ಪ್ರಾಥಮಿಕ ಚಿಕಿತ್ಸೆ ದೊರೆತ ಬಳಿಕ ಕಾರವಾರದ ಜಿಲ್ಲಾಸ್ಪತ್ರೆಗೆ ಬಂದು ದಾಖಲಾಗಿದ್ದಾರೆ.

ವೈದ್ಯರು ಕೇಳಿದಾಗ ಹಾವು ಯಾವುದು ಎಂದು ಹೇಳಲು ಗೊತ್ತಾಗುವುದಿಲ್ಲ ಎಂಬ ಕಾರಣಕ್ಕೆ ಕಚ್ಚಿದ ಹಾವನ್ನು ತುಂಬಿಕೊಂಡು ತೋರಿಸಲು ತಂದಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button