Big News
Trending

ಕುಮಟಾ-ಭಟ್ಕಳ ಮಾರ್ಗದಲ್ಲಿ ಇನ್ಮುಂದೆ ಎಂದಿನoತೆ ಸಂಚರಿಸಲಿದೆ ಸಾರಿಗೆ

ಪ್ರತಿ 30 ನಿಮಿಷಕ್ಕೊಂದು ಬಸ್ ಸಂಚಾರ
ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳುವಂತೆ ಮನವಿ

ಕುಮಟಾ: ಕರೊನಾ ಸೋಂಕು ಮತ್ತು ಲಾಕ್ ಡೌನ್ ಬಳಿಕ ಕೆಎಸ್‌ಆರ್‌ಟಿಸಿ ಸಾರಿಗೆ ಸಂಚಾರ ವಿರಳವಾಗಿತ್ತು. ಕೆಲವೊಂದು ಬಸ್ ಗಳು ಮತ್ರ ಸಂಚರಿಸುತ್ತಿದ್ದವು. ಆದರೆ, ಈಗ ಸಾರಿಗೆ ಸಂಚಾರ ಎಂದಿನoತೆ ಪ್ರಾರಂಭಿಸುತ್ತಿದೆ.


ಹೌದು, ಪ್ರಯಾಣಿಕರ ಬೇಡಿಕೆಯ ಮೇರಿಗೆ ಕುಮಟಾ-ಭಟ್ಕಳ ಮಾರ್ಗದಲ್ಲಿ ಸಾಮಾನ್ಯ ಸಾರಿಗೆಯ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ವಾಕರಸಾ ಸಂಸ್ಥೆಯ ಶಿರಸಿ ವಿಭಾಗಿಯ ನಿಂಯತ್ರಣ ಅಧಿಕಾರಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.


ಬೆಳಗ್ಗೆ 7 ಗಂಟೆಯಿoದ ಸಂಜೆ 6.30ರ ವರೆಗೆ ಪ್ರತಿ 30 ನಿಮಿಷಕ್ಕೊಂದರoತೆ ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಈ ಸಾರಿಗೆ ಪ್ರಯೋಜನೆಯನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

ಸೆಲ್ಕೋ ಸೋಲಾರ್ ದೀಪ ಬಳಸಿ, ನಿಮ್ಮ ಮನೆ ಬೆಳಗಿಸಿ

ಸೌರಶಕ್ತಿ ಅಂದರೆ ಕೇವಲ ಬೆಳಕಲ್ಲ
ಅದು ಸ್ವಾವಲಂಬಿ ಬದುಕಿಗೂ ದಾರಿ
ಇದು ಸೆಲ್ಕೋ ಸಂಸ್ಥೆಯ ಗುರಿ
ಸಂಪರ್ಕಿಸಿ: ದತ್ತಾರಾಮ ಭಟ್ಟ, ಮ್ಯಾನೇಜರ್
ಸೆಲ್ಕೋ ಸೋಲಾರ್, ಸನ್ಮಾನ ಹೊಟೇಲ್ ಹತ್ತಿರ
N.H 66, ಕುಮಟಾ
9880003735/9449360181

Back to top button