Follow Us On

WhatsApp Group
Important
Trending

ಹೊನ್ನಾವರ, ಕುಮಟಾ, ಭಟ್ಕಳದ ಇಂದಿನ ಕರೊನಾ ಮಾಹಿತಿ

ಹೊನ್ನಾವರದಲ್ಲಿ ಒಂದು ಸಾವು
ಪ್ರಭಾತನಗರ, ಸಾಲೇಹಿತ್ಲ, ಮಂಕಿ, ಮುಗ್ವಾ ಸೇರಿ ಹಲವೆಡೆ ಸೋಂಕು
ಕುಮಟಾದಲ್ಲಿ ಮೂರು ಪಾಸಿಟಿವ್
ಭಟ್ಕಳದಲ್ಲಿ ಎಲ್ಲೆಲ್ಲಿ ಇಂದು ಕೇಸ್ ದಾಖಲು?

[sliders_pack id=”1487″]

ಹೊನ್ನಾವರ : ತಾಲೂಕಿನಲ್ಲಿ ಇಂದು ಎಂಟು ಜನರಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಇದೇ ವೇಳೆ ಪಟ್ಟಣದ ರಥಬೀದಿಯ 59 ವರ್ಷದ ಪುರುಷ ಸಾವನ್ನಪ್ಪಿದಾರೆ. ಇವರು ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.


ಪಟ್ಟಣದ ಪ್ರಭಾತನಗರದ 58 ವರ್ಷದ ಮಹಿಳೆ, 35 ವರ್ಷದ ಮಹಿಳೆ, 26 ವರ್ಷದ ಯುವತಿ, ಸಾಲೇಹಿತ್ಲದ 49 ವರ್ಷದ ಮಹಿಳೆ, 21 ವರ್ಷದ ಯುವಕ, ಮಂಕಿಯ 63 ವರ್ಷದ ಪುರುಷ, ಮುಗ್ವಾ ಮೂಡಕ್ಕಟ್ಟೆಯ 57 ವರ್ಷದ ಮಹಿಳೆ ಸೇರಿದಂತೆ ಒಟ್ಟು 8 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಇಂದು ತಾಲೂಕಾ ಆಸ್ಪತ್ರೆಯಿಂದ ಏಳು ಜನರು ಡಿಸ್ಚಾರ್ಜ್ ಆಗಿದ್ದಾರೆ. 19 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 169 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಎಂಟು ಪ್ರಕರಣ ದೃಢಪಟ್ಟ ಬೆನ್ನಲ್ಲೆ, ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 6,11 ಕ್ಕೆ ಏರಿಕೆಯಾಗಿದೆ.

ಕುಮಟಾದಲ್ಲಿ ಮೂರು ಪಾಸಿಟಿವ್

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 3 ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಕುಮಟಾದ ತಾರಿಬಾಗಿಲ್, ಹೆಗಡೆ ಮತ್ತು ಹಳೇ ಮೀನುಮಾರುಕಟ್ಟೆ ಭಾಗದಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದೆ. ತಾರಿಬಾಗಿಲಿನ 26 ವರ್ಷದ ಯುವತಿ, ಹೆಗಡೆಯ 60 ವರ್ಷದ ಪುರುಷ, ಹಳೇ ಮೀನುಮಾರುಕಟ್ಟೆಯ 45 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಇಂದು 3 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 726 ಕ್ಕೆ ಏರಿಕೆಯಾಗಿದೆ.

ಭಟ್ಕಳದಲ್ಲಿ ಎರಡು ಕೇಸ್ ದಾಖಲು

ಭಟ್ಕಳ: ತಾಲೂಕಿನಲ್ಲಿ ಇಂದು ಎರಡು ಕರೊನಾ ಕೇಸ್ ದೃಢಪಟ್ಟಿದೆ. ಕಡವಿನಕಟ್ಟೆ ನಿವಾಸಿ 45 ವರ್ಷದ ಪುರುಷ ಈತ ಭಟ್ಕಳ ತಾಲೂಕಾಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆಗೆ ಒಳಗಾಗಿದ್ದರು. ಈತನಿಗೆ ಪಾಸಿಟಿವ್ ಬಂದಿದೆ. ಹಾಗೂ ಇನ್ನೋವ 49 ವರ್ಷದ ಪುರುಷ ರೂಕ್ನುದ್ದೀನ ಹೌಸ್ ನಿವಾಸಿ ಎಂದು ತಿಳಿದು ಬಂದಿದ್ದು ಇವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆಂದು ಮಾಹಿತಿ ದೊರಕಿದೆ.

ಬೇಕಾಗಿದ್ದಾರೆ

ಪ್ರತಿಷ್ಠಿತ ಕಂಪೆನಿಗೆ ವಿತರಕರು ಬೇಕಾಗಿದ್ದಾರೆ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಜಿಲ್ಲೆ & ತಾಲೂಕಾವಾರು ವಿತರಕರು ಬೇಕಾಗಿದ್ದಾರೆ
ಸಂಪರ್ಕಿಸಿ: 7848833568

Back to top button