Big News
Trending

ಜಿಲ್ಲೆಯಲ್ಲೂ ನೆಲೆಯೂರಿದ್ಯಾ ಡ್ರಗ್ಸ್ ಮಾಫಿಯಾ?

  • ಡ್ರಗ್ಸ್ ಬೇಟೆ ಆರಂಭಿಸಿದ ಶಿರಸಿ ಪೊಲೀಸರಿಗೆ ಹಲವು ಮಹತ್ವದ ಸುಳಿವು ಲಭ್ಯ
  • ಶಿರಸಿಯಲ್ಲಿ ಇದುವರೆಗೂ 17 ಮಂದಿ ಅರೆಸ್ಟ್
[sliders_pack id=”1487″]

ಶಿರಸಿ: ರಾಜ್ಯದಲ್ಲೆಡೆ ಈಗ ಡ್ರಗ್ಸ್ ಮಾಫಿಯಾ ಸದ್ದು ಮಾಡುತ್ತಿದ್ದು, ಈ ಕರಾಳ ದಂಧೆಯ ಬೆನ್ನುಹತ್ತಿದ್ದಾರೆ ಪೊಲೀಸರು. ಈಗಗಲೇ ಕೆಲ ಸೆಲಬ್ರಿಟಿಗಳ ಅಸಲಿ ಮುಖ ಬಯಲಾಗಿದ್ದು, ಇದರ ಬೆನ್ನ ಹಿಂದೆಯೇ ರಾಜ್ಯಾದ್ಯಂತ ಡ್ರಗ್ಸ್ ಬೇಟೆ ಶುರುವಾಗಿದೆ.

ಉತ್ತರಕನ್ನಡ ಜಿಲ್ಲೆಯಲ್ಲೂ ಮಾದಕವಸ್ತುವಿನ ವಾಸನೆ ಕೇಳಿಬರುತ್ತಿದೆ. ಜಿಲ್ಲೆಯಲ್ಲಿ ಶಿರಸಿ ಮತ್ತು ದಾಂಡೇಲಿ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಡ್ರಗ್ಸ್ ಮಾಫಿಯಾದ ಬೆನ್ನುಬಿದ್ದಿರುವ ಪೊಲೀಸರು ಒಂದೊAದೆ ಎಳೆಯನ್ನು ಬಿಡಿಸಿ, ಆರೋಪಿಗಳನ್ನು ಬಂಧಿಸುತ್ತಿದ್ದಾರೆ. ಶಿರಸಿಯಲ್ಲಿ ಕಳೆದ ಕೆಲ ದಿನಗಳ ಅಂತರದಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬoಧಪಟ್ಟoತೆ ಇದುವರೆಗೆ 17 ಜನರನ್ನು ಬಂಧಿಸುವ ಪೊಲೀಸರು, ಪ್ರಕರಣದ ಇಂಚಿAಚು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

ಗಂಜಾ ದಂಧೆಕೋರ ಮೇಲೆ ನಿರಂತರವಾಗಿ ಶೋಧ ಮುಂದುವರಿಸಿದ ಪೊಲೀಸರು, ಪ್ರಮುಖ ಆರೋಪಿಯನ್ನು ಮಂಜುನಾಥ ಪಾಠನರ್ ಎಂಬವನ್ನು ಬಂಧಿಸಿದ್ದು, ಈತನಿಂದ ಗಂಜಾ ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಗಾಂಜಾ ಪ್ರಕರಣದಲ್ಲಿ ಶಿರಸಿಯಲ್ಲಿ ಬಂಧಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಈತ ಶಿರಸಿ ಪಟ್ಟಣ, ಮತ್ತು ಸುತ್ತಮುತ್ತಲಿನಲ್ಲಿ ಗಾಂಜಾ ಮಾರಾಟ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ವಾರಗಳ ಹಿಂದೆ ಮಾರಕಾಸ್ತ್ರಗಳನ್ನು ಬಳಸಿಕೊಂಡು ಗಂಜಾ ಸೇವಿಸಿ ದರೋಡೆ ನಡೆಸಲು ಹೊರಟಿದ್ದ ಯುವಕರ ಗ್ಯಾಂಗ್ ಒಂದನ್ನು ಶಿರಸಿಯಲ್ಲಿ ಬಂಧಿಸಲಾಗಿತ್ತು. ಈ ವೇಳೆ ವಿದ್ಯಾ ನಗರದ ಮುರುಗೇಶ ಪೂಜಾರಿ , ಕಸ್ತೂರಬಾ ನಗರದ ಮಹಮ್ಮದ್ ಯಾಸೀನ್ , ಸವಣೂರಿನ ಮಯಾನಿ ಮೊಹಲ್ಲಾದ ಅಜ್ಮಿತ್ ಅಸ್ಲಾಂ , ಗುಲಾಮ್ ಮುಸ್ತಫಾ , ಮರ್ದಾನ್ ಶಫಿಸಾಬ ಹಾಗೂ ಮರಾಠಿಕೊಪ್ಪದ ಚರಣ್ ನಾಯ್ಕ ಎಂಬುವರನ್ನು ಪೊಲೀಸರು ಬಂಧಿಸಿದ್ದರು. ಈ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಒಬ್ಬೊಬ್ಬರನ್ನೇ ಬೆಲೆಗೆ ಬೀಳಿಸುತ್ತಿದ್ದಾರೆ.

ಈಗ ಸಿಕ್ಕಿಬಿದ್ದ ಆರೋಪಿಗಳ ಬೆನ್ನುಹತ್ತಿರುವ ಪೊಲೀಸರಿಗೆ ದೊಡ್ಡ ಜಾಲವೇ ಸಕ್ರೀಯವಾಗಿರುವ ಸುಳಿವು ಸಿಕ್ಕಿದೆ. ಕೆಲ ರಾಜಕಾರಣಿಗಳ ಹೆಸರು ತುಳುಕು ಹಾಕಿಕೊಂಡಿದೆ. ಈ ಎಲ್ಲಾ ಸತ್ಯಾಸತ್ಯತೆ ತನಿಖೆಯ ನಂತರವಷ್ಟೆ ತಿಳಿದುಬರಲಿದೆ.

ವಿಸ್ಮಯ ನ್ಯೂಸ್, ಶಿರಸಿ

ಬೇಕಾಗಿದ್ದಾರೆ

ಪ್ರತಿಷ್ಠಿತ ಕಂಪೆನಿಗೆ ವಿತರಕರು ಬೇಕಾಗಿದ್ದಾರೆ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಜಿಲ್ಲೆ & ತಾಲೂಕಾವಾರು ವಿತರಕರು ಬೇಕಾಗಿದ್ದಾರೆ
ಸಂಪರ್ಕಿಸಿ: 7848833568

ಕೆಳಗಿನ ಸೋಷಿಯಲ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಸುದ್ದಿಯನ್ನು ಶೇರ್ ಮಾಡಿ ಬೆಂಬಲಿಸಿ.

Back to top button