Follow Us On

WhatsApp Group
Important
Trending

ಸೋಲಾರ್ ಬೀದಿದೀಪದ ಬ್ಯಾಟರಿ ಕಳ್ಳತನ ಮಾಡಿದ್ದ ಕಿಲಾಡಿ ಕಳ್ಳರು ಅರೆಸ್ಟ್

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ, ಮುಟ್ಟಳ್ಳಿ, ವಾಜಗದ್ದೆ, ಸಿದ್ದಾಪುರ ಪಟ್ಟಣದ ನೆಹರೂ ಮೈದಾನ ಸೇರಿದಂತೆ ಹಲವೆಡೆ ಸೋಲಾರ್ ಬೀದಿ ದೀಪದ ಬ್ಯಾಟರಿ ಕಳ್ಳತನ ಮಾಡಿರುವ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಕಳ್ಳತನ ಮಾಡಿದ ಇಬ್ಬರು ಆರೋಪಿತರನ್ನ ಬಂಧಿಸಿ ಕಳ್ಳತನ ಮಾಡಿದ ಬ್ಯಾಟರಿಗಳನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ ಜುಪಿಟರ್ ಬೈಕ್ ವಶಕ್ಕೆ ಪಡೆದಿದ್ದಾರೆ.

ಕಂದಾಯ ಇಲಾಖೆ ಸಿಬ್ಬಂದಿಗೆ ಕತ್ತಲೆ ಭಾಗ್ಯ: ಆಡಳಿತ ವ್ಯವಸ್ಥೆಯ ಅಣಕ ನೋಡಿ?

ಮಹಮ್ಮದ್ ಕೈಫ್ ಅಬುಬಕರ್ (19) ವಿದ್ಯಾರ್ಥಿ ವಿವೇಕಾನಂದ ನಗರ ಕಾನಸೂರ್, ಚಂದನ್ ಶ್ರೀಧರ್ ಆಚಾರಿ (19) ವೆಲ್ಡಿಂಗ್ ವರ್ಕ್ ಬಾಳೆಸರ್ ರಸ್ತೆ ಕಾನಸೂರ್ ರನ್ನ ವಶಕ್ಕೆ ಪಡೆದು 10 ಬ್ಯಾಟರಿ (66 ಸಾವಿರ ) ಹಾಗು ಕೃತ್ಯಕ್ಕೆ ಬಳಸಿದ ಟಿವಿಎಸ್ ಜುಪಿಟರ್ ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Back to top button