Follow Us On

WhatsApp Group
Important
Trending

ಗೋಧಿ ಬಣ್ಣ, ದುಂಡನೆಯ ಮುಖ, 5 ಅಡಿ ಎತ್ತರ: ಕಾಣೆಯಾಗಿದ್ದಾಳೆ

ಈ ಯುವತಿಯ ಕುರಿತು ಮಾಹಿತಿ ಸಿಕ್ಕರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ

ಶಿರಸಿ: ತಾಲೂಕಿನ ರಾಮನಗರಕ್ಕೆ ಬಂದ ಪಾಳಾ ಮೂಲದ ಯುವತಿಯೊಬ್ಬಳು ನಾಪತ್ತೆಯಾದ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಗೋಡ ತಾಲೂಕಿನ ಪಾಳಾದ ರಾಧಿಕಾ ರವಿ ಅಂಗಡಿ ಕಾಣೆಯಾದ ಯುವತಿ. ಈಕೆ ಆಗಸ್ಟ್ 26 ರಂದು ಬೆಳಿಗ್ಗೆ 11.30 ಸುಮಾರಿಗೆ ತನ್ನ ಮನೆಯಾದ ಮುಂಡಗೋಡ ತಾಲೂಕಿನ ಪಾಳಾಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವಳು, ತನ್ನ ಊರಾದ ಪಾಳಾಕ್ಕೆ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ.

5 ಅಡಿ ಎತ್ತರವಿದ್ದು, ಗೋಧಿ ಬಣ್ಣ, ದುಂಡನೆಯ ಮುಖ, ಕನ್ನಡ, ಇಂಗ್ಲೀಷ್ ಮಾತನಾಡುತ್ತಾಳೆ. ಕಪ್ಪು ಬಿಳಿ ಬಣ್ಣದ ಚಕ್ಸ್ ಟಾಪ್, ಕಪ್ಪು ಬಣ್ಣದ ಲೆಗ್ಗಿನ್ಸ್, ಚೂಡಿದಾರ ಧರಿಸಿದ್ದಾಳೆ. ಈಕೆ ಎಲ್ಲಿಯಾದರೂ ಪತ್ತೆಯಾದಲ್ಲಿ ಶಿರಸಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಪಿ.ಎಸ್.ಐ ನಾಗಪ್ಪ.ಬಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button