Important
Trending

ಅತ್ಯಂತ ಕ್ಲಿಷ್ಟಕರ ತುರ್ತು ಶಸ್ತ್ರಚಿಕಿತ್ಸೆ ಯಶಸ್ವಿ: ಮಹಿಳೆ, ಮಗುವಿನ ಪ್ರಾಣ ರಕ್ಷಣೆ

ಭಟ್ಕಳ: ಗರ್ಭಿಣಿಯೊಬ್ಬರಿಗೆ ಅತ್ಯಂತ ಕ್ಲಿಷ್ಟಕರವಾಗಿದ್ದ ತುರ್ತು ಶಸ್ತ್ರಚಿಕಿತ್ಸೆಯನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ತಂಡ ಯಶಸ್ವಿಯಾಗಿ ನೆರವೇರಿಸಿದೆ. ಮಹಿಳೆಯರಿಗೆ ಗರ್ಭಧಾರಣೆ ಸಂದರ್ಭದಲ್ಲಿ ಕಂಡುಬರುವ ಬಹಳವಿರಳ ಪ್ರಕರಣ ಇದಾಗಿದೆ. ಗರ್ಭಧಾರಣೆಯ ಸಂದರ್ಭದಲ್ಲಿ ಮಹಿಳೆಯರು ತೀವ್ರ ರಕ್ತಸ್ರಾವವಾಗಿ ಮರಣ ಹೊಂದುವ ಸಾಧ್ಯತೆ ಹೆಚ್ಚಾಗಿರುತ್ತದೆ. ಭಟ್ಕಳ ತಾಲೂಕ ಆಸ್ಪತ್ರೆಯಲ್ಲಿ ೨೫ ವರ್ಷಗಳ ನಂತರ ಇಂತಹ ಬಹಳ ಅಪರೂಪದ ಪ್ರಕರಣವನ್ನು ನಮ್ಮ ವೈದ್ಯರ ತಂಡ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ ಮಹಿಳೆಯ ಮತ್ತು ಮಗುವಿನ ಪ್ರಾಣವನ್ನು ಉಳಿಸಿದ್ದಾರೆ ಎಂದು ತಾಲೂಕ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ತಿಳಿಸಿದರು.

ನೌಕಾನೆಲೆಯಂತ ಸೂಕ್ಷ್ಮ ಪ್ರದೇಶದ ಮಾಹಿತಿ ಪಡೆದುಕೊಳ್ಳಲು, ಸ್ಥಳೀಯರನ್ನು, ಅಮಾಯಕರನ್ನು ಬಳಸಿಕೊಳ್ಳುತ್ತಿರುವ ಒಳಸಂಚು: ಅಧಿಕಾರಿಗಳು ದಾಳಿ ನಡೆಸಿ ವಿಚಾರಿಸಿದ್ದು ಯಾರನ್ನು?

ಭಟ್ಕಳ ತಾಲೂಕಿನ ಶಿರಾಲಿ ಮೂಲದ ೩೪ ವರ್ಷದ ಮಹಿಳೆ ಅಸಹಜ ಹೊಟ್ಟೆ ನೋವಿನಿಂದ ಬಳಲುತ್ತಿದ್ದು , ಆಕೆಯನ್ನು ಎಮ್‌ಆರ್‌ಐ ಪರೀಕ್ಷೆಗೆ ಒಳಪಡಿಸಿದ ನಂತರ ಆಸಮತೋಲಿತ ಮಲ ಮತ್ತು ಗರ್ಭಕೋಶದಿಂದ ಬಳಲುತ್ತಿದ್ದು ಖಾತ್ರಿಯಾಗಿತ್ತು. ಇದರಿಂದ ಮಹಿಳೆಯ ಜೀವಕ್ಕೆ ತೊಂದರೆಯಾಗುವ ಸಾಧ್ಯತೆ ಕಂಡುಬoದಿತ್ತು.

ಹೀಗಾಗಿ ಹೆಚ್ಚಿನ ಚಿಕಿತ್ಸೆ ನೀಡಲು ಮೂರ್ನಾಲ್ಕು ತಜ್ಞ ವೈದ್ಯರ ಸಲಹೆಗಳನ್ನು ಪಡೆಯಲಾಯಿತು. ಈ ತುರ್ತು ಶಸ್ತ್ರಚಿಕಿತ್ಸೆಯ ಗಂಭೀರತೆಯನ್ನು ಅರಿತ ಭಟ್ಕಳ ವೈದ್ಯರ ತಂಡ ಮಹಿಳೆ ಕುಟುಂಬದವರ ಒಪ್ಪಿಗೆಯನ್ನು ಪಡೆದು ಭಟ್ಕಳದ ಖ್ಯಾತ ಪ್ರಸೂತಿ ತಜ್ಞೆ ಡಾ.ಸಂಶನೂರ್ ನೇತೃತ್ವದಲ್ಲಿ ಒಂದು ಗಂಟೆಯ ಒಳಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ತಾಯಿ ಮತ್ತು ಮಗು ಇಬ್ಬರನ್ನು ರಕ್ಷಣೆ ಮಾಡಿಲಾಗಿದೆ.

ಹೆಚ್ಚಿನ ಚಿಕಿತ್ಸೆಗಾಗಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಎಂದು ಮಕ್ಕಳ ತಜ್ಞ ಡಾ. ಸುರಕ್ಷಿತ್ ಶೆಟ್ಟಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವೈದ್ಯರಾದ ಡಾ. ಅರುಣ್ ನಾಯಕ್ , ಡಾ. ಪವನ್. ಡಾ. ಮಹಾಂತೇಶ್. ಡಾ. ಸುರಕ್ಷಿತ್ ಶೆಟ್ಟಿ ಡಾಕ್ಟರ್ ಶoಶನೂರ್ ಉಪಸ್ಥಿತರಿದ್ದರು

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Back to top button