Follow Us On

WhatsApp Group
Focus News
Trending

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನ ಮೇಲೆ ಪೋಲೀಸ್ ದೌರ್ಜನ್ಯ ಖಂಡಿಸಿ ಕಸಾಪ ತಾಲೂಕಾ ಘಟಕದಿಂದ ಮನವಿ

ಅಂಕೋಲಾ : ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ. ಎನ್. ವಾಸರೆಯವರ ಮೇಲೆ ದಾಂಡೇಲಿಯಲ್ಲಿ ಜರುಗಿದ ಪೊಲೀಸರ ದೌರ್ಜನ್ಯ ಖಂಡಿಸಿ ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕನ್ನಡ ಸಾಹಿತ್ಯ ಪರಿಷತ್ತು ಅಂಕೋಲಾ ತಾಲೂಕ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರರವರ ಮೂಲಕ ಮನವಿ ಸಲ್ಲಿಸಲಾಯಿತು.

ಅಗಷ್ಟ 28 ರಂದು ದಾಂಡೇಲಿಯಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಬಿ.ಎನ್. ವಾಸರೆಯವರು ಅಧಿಕಾರಿಗಳ ಗಮನಕ್ಕೆ ತರುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಅವರ ಮೇಲೆ ಸಾರ್ವಜನಿಕವಾಗಿ ದೌರ್ಜನ್ಯ ತೋರಿದ್ದು ಅಕ್ಷಮ್ಯವಾದ ಸಂಗತಿಯಾಗಿದೆ. ಈ ದೌರ್ಜನ್ಯವನ್ನು ಕ.ಸಾ.ಪ. ಅಂಕೋಲಾ ಘಟಕ ತೀವ್ರವಾಗಿ ಖಂಡಿಸುತ್ತದೆ. ಈ ಅಧಿಕಾರಿಗಳ ಮೇಲೆ ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ತಹಶೀಲ್ದಾರ ಅನಂತ ಶಂಕರ ಮನವಿಯನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕಸಾಪ ಅಂಕೋಲಾ ತಾಲೂಕು ಘಟಕದ ಅಧ್ಯಕ್ಷರಾದ ಗೋಪಾಲಕೃಷ್ಣ ನಾಯಕ, ಪ್ರಮುಖರಾರ ಮಹಾಂತೇಶ ರೇವಡಿ, ಪ್ರಕಾಶ ಕುಂಜಿ, ಸುಜೀತ ನಾಯ್ಕ, ನ್ಯಾಯವಾದಿ ಉಮೇಶ ನಾಯ್ಕ, ಎಮ್ ಬಿ ಆಗೇರ, ರಮೇಶ ಗೌಡ ಮತ್ತಿತರರಿದ್ದರು. ಇದೇ ದೌರ್ಜನ್ಯದ ಘಟನೆಗೆ ಸಂಬಂಧಿಸಿದಂತೆ,ದಾಂಡೇಲಿಯ ಸಿಪಿಐ ಭೀಮಣ್ಣ ಎಂ ಸೂರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದಲೂ ತಹಶೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಹಿರಿಯ ಪತ್ರಕರ್ತರಾದ ವಿಠಲದಾಸ ಕಾಮತ ಮಾತನಾಡಿ ದಾಂಡೇಲಿಯ ಪೊಲೀಸ್ ವೃತ್ತ ನಿರೀಕ್ಷಕರಾದ ಭೀಮಣ್ಣ ಎಂ. ಸೂರಿ ಅವರು ದಾಂಡೇಲಿ ಪತ್ರಕರ್ತರ ಜೊತೆ ದರ್ಪದಿಂದ ಹಾಗೂ ಅನುಚಿತವಾಗಿ ನಡೆದುಕೊಂಡಿರುವುದನ್ನು ತೀವೃವಾಗಿ ಖಂಡಿಸುತ್ತೇವೆ ಮತ್ತು ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಅಂಕೋಲಾ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಒತ್ತಾಯಿಸುತ್ತದೆ. ಸಮಾಜದಲ್ಲಿ ಪತ್ರಕರ್ತರೂ ಕೂಡಾ ಗೌರವದ ಸ್ಥಾನದಲ್ಲಿಯೇ ಇದ್ದವರು, ದಿನದ 24 ಗಂಟೆಗಳ ಕಾಲ ಜಾಗೃತರಾಗಿದ್ದು ಸುದ್ದಿ ನೀಡುವವರು.

ಅವರೂ ಸಹ ಸುದ್ದಿ ಮಾಡುವಾಗ ಕರ್ತವ್ಯ ನಿರತರೇ ಆಗಿರುತ್ತಾರೆ. ಪತ್ರಕರ್ತರಿಗೂ ಕೂಡಾ ಬರೆಯಲು ಹಾಗೂ ಮಾತನಾಡಲು, ಅನ್ಯಾಯ ವಿರೋಧಿಸಲು ಸಂವಿಧಾನ ಬದ್ಧ ಹಕ್ಕಿದೆ. ಹೀಗಿರುವಾಗ ಜವಾಬ್ದಾರಿ ಸ್ಥಾನದಲ್ಲಿದ್ದ ಸಿ.ಪಿ.ಐ. ಭೀಮಣ್ಣ, ಎಂ.ಸೂರಿ ಅವರು ಅಧಿಕಾರದ ದರ್ಪ ತೋರಿಸಿ, ಪತ್ರಕರ್ತರನ್ನು ಎಳೆದಾಡಿ, ಏರು ಧ್ವನಿಯಲ್ಲಿ ಬೈದಾಡಿರುವುದು ಬೇಸರ ತಂದಿದೆ. ಪೊಲೀಸ್ ಅಧಿಕಾರಿಯೇ ಕಾನೂನು ಸುವ್ಯವಸ್ಥೆ ಹದಗೆಡುವಂತಹ ವಾತಾವರಣಕ್ಕೆ ಎಡೆಮಾಡಿಕೊಟ್ಟಿರುವುದು ಖಂಡನೀಯವಾಗಿದೆ ಎಂದರು.

ದಾಂಡೇಲಿ ನಗರದ ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯರ ವಿರುದ್ಧ ಆದೇ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ದಾಂಡೇಲಿಯ ಪೊಲೀಸ್ ವೃತ್ತ ನಿರೀಕ್ಷಕರಾದ ಭೀಮಣ್ಣ ಎಂ. ಸೂರಿ ಅವರು ಪತ್ರಕರ್ತರ ಜೊತೆ ದರ್ಪದಿಂದ ಹಾಗೂ ಅನುಚಿತವಾಗಿ ನಡೆದುಕೊಂಡಿದ್ದಾರೆ.

ಈ ಘಟನೆಯ ಕುರಿತಂತೆ ಪತ್ರಕರ್ತರನ್ನು ಎಳೆದಾಡಿ ದರ್ಪ ತೋರಿಸಿದ ಸಿ.ಪಿ.ಐ. ಭೀಮಣ್ಣ.ಎಂ.ಸೂರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ವರದಿ ಮಾಡಲು ತೆರಳುವ ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಗೃಹ ಸಚಿವರು ಕೂಡಲೇ ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ತಹಶೀಲ್ದಾರ ಅನಂತ ಶಂಕರ ಮನವಿಯನ್ನು ಸ್ವೀಕರಿಸಿದರು.

ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಗೌರವಾಧ್ಯಕ್ಷ ರಾಘು ಕಾಕರಮಠ, ಉಪಾಧ್ಯಕ್ಷ ನಾಗರಾಜ ಮಂಜುಗುಣಿ, ಕೆ ರಮೇಶ, ಸುಭಾಷ ಕಾರೇಬೈಲ್,ನಾಗರಾಜ ಶೆಟ್ಟಿ, ನಾಗರಾಜ ಜಾಂಬಳೇಕರ, ಮೋಹನ ದುರ್ಗೇಕರ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button