Follow Us On

WhatsApp Group
Important
Trending

ಅಮಾವಾಸ್ಯೆಯ ರಾತ್ರಿಯ ವೇಳೆ ಸಾರ್ವಜನಿಕ ಸ್ಥಳದಲ್ಲಿ ಏನೋ ಮಾಡಲು ಬಂದವ ಲಾಕ್? ಆತನ ಮುಖ ನೋಡಲು ಮುಂದಾದ ಸ್ಥಳೀಯರೇ ಶಾಕ್ !

ಅಂಕೋಲಾ : ಅಮವಾಸ್ಯೆಯ ರಾತ್ರಿಯ ವೇಳೆ, ಸಾರ್ವಜನಿಕರು ಓಡಾಡುವ ಮುಖ್ಯ ರಸ್ತೆಯಲ್ಲಿ ವ್ಯಕ್ತಿಯೋರ್ವ ಸಂಶಯಾಸ್ಪದ ರೀತಿಯಲ್ಲಿ ವರ್ತಿಸಿ,ಪೂಜೆಗೆ ಬಳಸಿದ ಮಾದರಿಯ ಲಿಂಬುಗಳನ್ನು ಇಟ್ಟು ಹೋಗಬೇಕೆನ್ನುವಷ್ಟರಲ್ಲಿ ಸೆಂಟರ್ ಲಾಕ್ ಆದ ಕುತೂಹಲಕಾರಿ ಘಟನೆ ಪಟ್ಟಣ ವ್ಯಾಪ್ತಿಯ ವಾರ್ಡ ಒಂದರಲ್ಲಿ ಸೆ 1 ರ ಸೋಮವಾರ ನಡೆದಿದೆ. ಪಟ್ಟಣದ ಲಕ್ಷ್ಮೇಶ್ವರ ವಾರ್ಡಿನ, 3 ರಸ್ತೆ ಕೂಡುವ ಮುಖ್ಯ ಸಾರ್ವಜನಿಕ ಸ್ಥಳದಲ್ಲಿ ಅಮವಾಸ್ಯೆಯ ದಿನದಂದು ಆದಾರೋ ವಾಮಾಚಾರ ( BLACK MAGIC ) ಮಾಡಿದಂತೆ ರಸ್ತೆ ಮಧ್ಯೆ ಲಿಂಬುಗಳು, ಕರಿ-ಕೆಂಪು ದಾರ ಮತ್ತಿತರ ವಸ್ತುಗಳನ್ನು ಇಟ್ಟು ನಾಪತ್ತೆಯಾಗುತ್ತಿದ್ದರು.

ಒಂದುವರೆ ತಿಂಗಳ ಹಸುಗೂಸು ತಂದು ಪ್ರತಿಭಟಿಸಬೇಕೆ? ಮಹಿಳೆ ಆಕ್ರೋಶ ಹೊರಹಾಕಿದ್ಯಾಕೆ ?

ಇತ್ತೀಚೆಗೆ ಅದು ಪ್ರತೀ ಅಮವಾಸ್ಯೆಗೂ ಅತಿಯಾಗ ತೊಡಗಿ, ಸ್ಥಳೀಯರ ನೆಮ್ಮದಿ ಕೆಡಿಸಿತ್ತು. ಈ ವಿಷಯ ಇತ್ತೀಚೆಗೆ ವಿಸ್ಮಯ ವಾಹಿನಿ ಸಹಿತ ಇತರೆ ಕೆಲ ಸುದ್ದಿ ಮಾಧ್ಯಮಗಳಲ್ಲೂ ಪ್ರಕಟವಾಗಿತ್ತು. ಇದಾದ ಬಳಿಕ ಪೊಲೀಸ್ ಇಲಾಖೆಯವರು ಸಹ ಈ ಕುರಿತು ಯಾವುದೇ ವ್ಯಕ್ತಿಗಳ ಮೇಲೆ ಸಂಶಯವಿದ್ದರೆ ತಿಳಿಸಿ,ವಿಚಾರಿಸೋಣ ಎಂದಿದ್ದರು. ಈ ವೇಳೆಗೆ ಸ್ಥಳೀಯರಿಗೆ ಒಂದಿಬ್ಬರ ಮೇಲೆ ಸಂಶಯವಿತ್ತಾದರೂ,ಪ್ರತ್ಯಕ್ಷ ನೋಡಿದರು ಪ್ರಮಾಣಿಸಿ ನೋಡಬೇಕು ಎನ್ನುವಂತೆ,ಪತ್ತೆ ಕಾರ್ಯಾಚರಣೆಗೆ ಮುಂದಾಗಿದ್ದರು.

ಆದರೆ ಅದೇ ಅಸಾಮಿಯೊಬ್ಬ ತನ್ನ ಈ ಹಿಂದಿನ ಚಾಳಿ ಮುಂದುವರಿಸುವಂತೆ,ರಾತ್ರಿ ವೇಳೆ ತನ್ನ ದ್ವಿಚಕ್ರ ವಾಹನದಲ್ಲಿ ಬಂದವನು, 3 ರಸ್ತೆಗಳು ಕೂಡುವ ಮುಖ್ಯ ಸ್ಥಳದಲ್ಲಿ ,ತಾನು ಎಲ್ಲಿಂದಲೋ ತಂದಿದ್ದ ಮಂತ್ರಿಸಿದ ಅಥವಾ ಪೂಜೆ ಮಾಡಿದ ಲಿಂಬುಗಳನ್ನು ಇಟ್ಟು ಮುಂದೆ ಸಾಗಲು ಯತ್ನಿಸಿದ್ದಾನೆ.ಆ ವ್ಯಕ್ತಿಯ ಪತ್ತೆಗಾಗಿಯೇ ರಾತ್ರಿ ವೇಳೆಯೂ ಕಾರ್ಯಾಚರಿಸುವ ವಿಶೇಷ ಕೆಮರಾ ಅಳವಡಿಸಿ ಕಾದು ಕುಳಿತಿದ್ದ ಕೆಲವರು, ಲಿಂಬು ಎಸೆದಿರುವ ಸ್ಪಷ್ಟ ಚಿತ್ರಣಗಳನ್ನು ಗಮನಿಸಿ, ಆ ವ್ಯಕ್ತಿಯನ್ನು ನೆರಳಿನಂತೆ ಹಿಂಬಾಲಿಸಿದ್ದಾರೆ.

ಆದರೆ ಆತ ಅಷ್ಟರಲ್ಲಾಗಲೇ ತನ್ನ ಗಾಡಿ ಮುಂದೆ ಚಲಾಯಿಸಿದ್ದು,ಅವನು ಕೂಡು ರಸ್ತೆ ದಾಟಿ ಹೋಗಬೇಕು ಎನ್ನುವಷ್ಟರಲ್ಲಿ ಎದುರಾದ ಒಂದಿಬ್ಬರು,ಆತನನ್ನು ತಡೆದು ವಿಚಾರಿಸಲು ಮುಂದಾಗುವ ಮೂಲಕ ಆ ವ್ಯಕ್ತಿ ಮತ್ತೆಲ್ಲೂ ಹೋಗಲಾಗದೇ ಸೆಂಟರಲಾಕ್ ಆದಂತಿದೆ. ಹಾಗಾದರೆ ಆತ ಯಾರಿರಬಹುದು ಎಂದು ಮಂದ ಬೆಳಕಿನಲ್ಲಿಯೇ ಆತನ ಮುಖ ನೋಡಲು ಹೋದವರೇ ಕ್ಷಣ ಕಾಲ ಶಾಕ್ ಆಗುವಂತಾಗಿದೆ. ಏಕೆಂದರೆ ಮೇಲ್ನೋಟಕ್ಕೆ ಆ ವ್ಯಕ್ತಿ ಪಟ್ಟಣದಾದ್ಯಂತ ಚಿರಪರಿಚಿತ ಮುಖವಾಗಿದ್ದು, ಈತ ಅದೇಕೆ ಹೀಗೆ ಮಾಡಿರಬಹುದು? ತಾನು ಈ ಹಿಂದೆ ಸಲ್ಲಿಸಿದ ಸೇವೆಗೂ ಅದು ಅಗೌರವ ತೋರಿದಂತಲ್ಲವೇ ಎಂದು ಸ್ಥಳೀಯರು ಮಾತನಾಡಿಕೊಂಡಂತಿತ್ತು.

ತನ್ನ ವೈಯಕ್ತಿಕ ಹಿತಾಸಕ್ತಿಗೋ,ಇತರೆ ಕಾರಣಗಳಿಂದ ಆತ ಹಾಗೆ ಮಾಡಿರಬಹುದಾದರೂ ಸಹ ಆತನ ನಡೆಯನ್ನು ನಯವಾಗಿಯೇ ಖಂಡಿಸಲಾಯಿತು.ಇದರಿಂದ ಆತನು ಸಹ ಸ್ವಲ್ಪ ವಿಚಲಿತಗೊಂಡಂತಿದ್ದು,ನಂತರ ಸಾರ್ವಜನಿಕ ದೃಷ್ಟಿಯಲ್ಲಿ ತನ್ನದು ತಪ್ಪು ಎಂಬುದನ್ನು ಅರಿತೋ ಏನೋ ಈ ಹಿಂದಿನಿಂದಲೂ ಇಲ್ಲಿ ಅದನ್ನು ನಾನೇ ಮಾಡುತ್ತಾ ಬಂದಿದ್ದೆ ಎಂಬಂತೆ ತಪ್ಪೊಪ್ಪಿಕೊಂಡಂತಿತ್ತು.ಪರಿಚಿತ ಮುಖ ಮತ್ತು ಮುಂದೆ ಮತ್ತೆ ಹಾಗೆ ಮಾಡಲಾರರು ಎಂಬ ಭರವಸೆಯಲ್ಲಿ,ಸ್ಥಳೀಯರು ಈ ವಿಷಯ ಮತ್ತೆ ದೊಡ್ಡ ಮಾಡದೆ ಸುಮ್ಮನಾಗಿದ್ದರು.ಆದರೂ ತದನಂತರ ಸೇರಿದ ಕೆಲವರು ಈ ವಿಚಾರವನ್ನು ಪೊಲೀಸ್ ಠಾಣೆಗೆ ಒಯ್ದೆ ಸುಖಾಂತ್ಯಗೊಳಿಸಬೇಕಿತ್ತು.

ಆತ ಬಂದು ಹೋದ ನಂತರ ಆತನಿಗೆ ಬೆಂಗಾವಲಾಗಿ ಬೇರೊಬ್ಬರು ಬಂದಿರುವ,ಇಲ್ಲವೇ ಅನ್ಯ ಕಾರಣಗಳಿಂದ ಅಲ್ಲೇ ಸಂಶಯಸ್ಪದವಾಗಿ ಸುತ್ತಾಡುತ್ತಿದ್ದು,ಅವರನ್ನು ವಿಚಾರಣೆಗೊಳಪಡಿಸಬೇಕಿತ್ತು ಎಂದು ತಮ್ಮ ಅಸಮಾಧಾನ ಹೊರಹಾಕಿ,ಚರ್ಚಿಸುತ್ತಿರುವುದು ಕಂಡುಬಂತು.ಇನ್ನು ಮುಂದೆ ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಇಂತಹ ಯಾವುದೇ ಚಟುವಟಿಕೆಗಳು ಈ ಭಾಗದಲ್ಲಿ ನಡೆಯದಿರಲಿ,ಅನಿವಾರ್ಯವಾದರೆ ಈಗ ಇರುವ ಸಾಕ್ಷ್ಯ ಹಾಗೂ ದಾಖಲೆಗಳ ಸಮೇತ ಪೊಲೀಸರಿಗೆ ವಿಷಯ ಮುಟ್ಟಿಸೋಣ ಎಂದು ಸ್ಥಳೀಯ ಪ್ರಮುಖರು,ಅಕ್ಕಪಕ್ಕದ ಕೆಲ ನಿವಾಸಿಗಳು ಮಾತನಾಡಿಕೊಂಡಿದ್ದಾರೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್, ವಿಲಾಸ್ ನಾಯಕ ಅಂಕೋಲಾ

Back to top button