ಹೊನ್ನಾವರ: ರಾಜ್ಯದ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಹೊನ್ನಾವರದ ನೀಲಗೋಡ ಯಕ್ಷೀ ಚೌಡೇಶ್ವರಿ ದೇವಸ್ಥಾನದಲ್ಲಿ ಅಮವಾಸ್ಯೆ ಪ್ರಯುಕ್ತ ನಡೆಯುವ ವಿಶೇಷ ಪೂಜೆ, ತೀರ್ಥಸ್ನಾನ ನೆರವೇರಿತು. ರಾಜ್ಯದ ಮೂಲೆ ಮೂಲೆಗಳಿಂದ ಅಪಾರಭಕ್ತರು ಆಗಮಿಸಿ ವಿವಿಧ ಸೇವೆಗಳನ್ನು ಸಲ್ಲಿಸಿದರು.
ಇಲ್ಲಿ ದೇವಿಗೆ ವಿಶೇಷ ಪೂಜೆ, ತುಪ್ಪದ ಆರತಿಯನ್ನು ಬೆಳಗಿಸಿದರೆ ಇಷ್ಟಾರ್ಥಸಿದ್ದಿಯಾಗುತ್ತದೆ ಎನ್ನುವ ನಂಬಿಕೆಯಿದೆ, ಅಮಾವಾಸ್ಯೆಯಂದು ದೇವಿಗೆ ಉಡಿ ತುಂಬಿ ಭಕ್ತರು ತಮ್ಮ ಹರಕೆಯನ್ನು ಸಲ್ಲಿಸುತ್ತಾರೆ. ಪ್ರತಿ ಅಮವಾಸ್ಯೆದಂದು ಗುರುಗಳಾದ ಮಾದೇವ ಸ್ವಾಮಿಗಳ ಕೈಯಿಂದ ಭಕ್ತರಿಗೆ ತೀರ್ಥಸ್ನಾನ ನಡೆಯುತ್ತಿದ್ದು, ಇದರಿಂದ ಭಕ್ತರ ಆರೋಗ್ಯದಲ್ಲಾಗಲೀ, ವ್ಯವಹಾರದಲ್ಲಾಗಲೀ ಓಳಿತನ್ನು ಭಕ್ತರು ಕಂಡುಕೊoಡಿದ್ದಾರೆ.
ಈ ಸಂದರ್ಭದಲ್ಲಿ ಡಾ. ಶ್ರೀಪಾದ ಶೆಟ್ಟಿಯವರು ಮಾತನಾಡಿ ಯಕ್ಷಿ ಚೌಡೇಶ್ವರಿ ಹಾಗೂ ಸತ್ಯ ದೇವತೆಯು ನೀಲಗೋಡಿನಲ್ಲಿ ನೆಲೆಸಿದ್ದು, ತಾಯಿ ಭಕ್ತರ ಕಷ್ಟವನ್ನು ಬಗೆಹರಿಸುತ್ತಿದ್ದಾಳೆ. ಈ ಸ್ಥಾನದಲ್ಲಿ ಶಕ್ತಿಯ ಪ್ರಭಾವವಿದ್ದು, ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಜಾಸ್ತಿಯಾಗುತ್ತಿರುವುದು ಈ ಸ್ಥಳದ ಮಹಿಮೆ ಎಂದರು.