Follow Us On

WhatsApp Group
Important
Trending

ಮುಳ್ಳಿನಿಂದ ಕೂಡಿದ ಪೊದೆ ಹಿಂದೆ ನವಜಾತ ಶಿಶು ಎಸೆದು ಹೋದ ದುರುಳರು

ಕಾರವಾರ: ಕೆಲತಾಸುಗಳ ಹಿಂದಷ್ಟೆ ಜನಿಸಿದ ಶಿಶುವನ್ನು ಪೊದೆಯ ಹಿಂದೆ ಎಸೆದು ಹೋದ ಹೃದಯವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ. ಮಳೆ ನೀರಿನಿಂದ ರಾಡಿಯಾದ ಮಣ್ಣಿನಲ್ಲಿ ಮಗುವನ್ನು ಎಸೆದು ಹೋಗಿದ್ದು, ಮುಳ್ಳಿನ ನಡುವೆ ಮಲಗಿದ್ದ ಮಗುವನ್ನು ನೋಡಿದವರು ರಕ್ಷಿಸಿದ್ದಾರೆ.

ವೇಶ್ಯಾವಾಟಿಕೆ ಆರೋಪ: ಮುರ್ಡೇಶ್ವರದಲ್ಲಿ ಹೊಟೇಲ್ ಮೇಲೆ ದಾಳಿ: ನಾಲ್ವರು ವಶಕ್ಕೆ

ಕಾಜುಭಾಗದಿಂದ ಕೂರ್ಸೆವಾಡಕ್ಕೆ ತೆರಳುವ ದಾರಿ ಅಂಚಿನ ವಿಜಯವಾಡ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಹಿಂದೆ ಮಗು ಅಳುವ ಸದ್ದು ಕೇಳಿಸಿದೆ. ಹೀಗಾಗಿ ಅನುಮಾನಗೊಂಡ ಸ್ಥಳೀಯರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮಳೆ ನೀರಿನಿಂದ ಆವೃತವಾದ ಮಣ್ಣಿನಲ್ಲಿ ಪೊದೆಯ ಸಮೀಪ ಕೆಲ ತಾಸುಗಳ ಹಿಂದಷ್ಟೆ ಜನಿಸಿದ ಮಗು ಪತ್ತೆಯಾಗಿದೆ.

ಸ್ಥಳೀಯರೆಲ್ಲರೂ ಸೇರಿ ಈ ವೇಳೆ ಪೊಲೀಸರು, ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಆಸ್ಪತ್ರೆ ಸಿಬ್ಬಂದಿ ಮಗುವಿನ ಜೀವ ರಕ್ಷಿಸಿದ್ದಾರೆ. ಮಗುವನ್ನು ಜಿಲ್ಲಾಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರಿಸಿ ಆರೈಕೆ ಮಾಡಲಾಗುತ್ತಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button