ಅಂಕೋಲಾ ಪೊಲೀಸ್ ಠಾಣೆಗೆ ನೂತನ ಸಿಪಿಐ ಹಾಜರ್

ಅಂಕೋಲಾ : ತಾಲೂಕಿನ ಪೊಲೀಸ್ ಠಾಣೆಯ ನೂತನ ಸಿಪಿಐ ಆಗಿ ಚಂದ್ರಶೇಖರ ಮಠಪತಿ ಯವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಧಾರವಾಡದ ಮಹಿಳಾ ಪೊಲೀಸ್ ಠಾಣೆಯಿಂದ ಅಂಕೋಲಾಕ್ಕೆ ವರ್ಗಾವಣೆಗೊಂಡಿದ್ದರು. 2005 ನೇ ಬ್ಯಾಚಿನ ಪೊಲೀಸ್ ಅಧಿಕಾರಿಯಾಗಿ ಸೇವೆ ಆರಂಭಿಸಿದ ಇವರು, ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಮಂಕಿ ಹಾಗೂ ಕಾರವಾರ ಠಾಣೆಗಳಲ್ಲಿಯೂ ಸೇವೆ ಸಲ್ಲಿಸಿ ಜಿಲ್ಲೆಯ ಭೌಗೋಳಿಕ ಪರಿಚಯ ದೊಂದಿಗೆ ಇಲ್ಲಿಯೇ ಕರ್ತವ್ಯ ನಿರ್ವಹಿಸಿದ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ.

ಇದನ್ನೂ ಓದಿ: ಇಲ್ಲಿದೆ ಬೃಹತ್ ಉದ್ಯೋಗಾವಕಾಶ: 1476 ಹುದ್ದೆಗಳಿಗೆ ನೇಮಕಾತಿ: SSLC ಆದವರು ಅರ್ಜಿ ಸಲ್ಲಿಸಿ

ಪಕ್ಕದ ಜಿಲ್ಲೆಗಳಾದ ಬಾಗಲಕೋಟೆ,ವಿಜಾಪುರ,ಧಾರವಾಡ ಮತ್ತಿತರೆಡೆ ಸೇರಿ ಇಲಾಖೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ್ದಾರೆ. ಅಂಕೋಲಾ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಕಾಂತ್ ತೋಟಗಿ ಅವರನ್ನು ಬೆಳಗಾವಿ ವೃತ್ತಕ್ಕೆ ವರ್ಗಾಯಿಸಲಾಗಿದ್ದು, ತೋಟಗಿ ಅವರು ತಮ್ಮ ಇಲ್ಲಿನ ಅಧಿಕಾರವನ್ನು ಮಠಪತಿ ಅವರಿಗೆ ಹಸ್ತಾಂತರಿಸಿದರು.

ಕಳೆದ ಲೋಕಸಭೆ ಚುನಾವಣೆಗೂ ಪೂರ್ವ ತಾಲೂಕಿಗೆ ಆಗಮಿಸಿದ್ದ ತೋಟಗಿ ಇವರು, ಸುಮಾರು 7 ತಿಂಗಳುಗಳ ಕಾಲ ತಾಲೂಕಿನಲ್ಲಿ ಸೇವೆ ಸಲ್ಲಿಸಿದ್ದು, ಅತ್ಯಲ್ಪ ಅವಧಿಯಲ್ಲಿಯೇ ಹಲವರ ಪ್ರೀತಿ ಹಾಗೂ ಗೌರವಕ್ಕೆ ಪಾತ್ರರಾಗಿದ್ದರು.ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ ಸೇರಿದಂತೆ ತಾಲೂಕಿನ ವಿವಿಧ ಸ್ಥರದ ಕೆಲ ಗಣ್ಯರು,ತೋಟಗಿ ಅವರ ಸೇವೆಯನ್ನು ಗೌರವಿಸಿ,ಪ್ರೀತಿಯಿಂದ ಬೀಳ್ಕೊಟ್ಟಿದ್ದರು. ಅಂಕೋಲಕ್ಕೆ ನೂತನವಾಗಿ ಆಗಮಿಸಿರುವ ಯುವ ಮತ್ತು ಅನುಭವಿ ಅಧಿಕಾರಿಯೂ ತಮ್ಮ ಜನಪದ ನಿಲುವಿನೊಂದಿಗೆ ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂದಾಗುವವರೆಂಬ ಭರವಸೆಯನ್ನು ಕೆಲ ಪ್ರಮುಖರು ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version