ಆಕರ್ಷಣೆ ಕೇಂದ್ರಬಿಂದು ವಿಶ್ವಹಿಂದು ಪರಿಷತ್ ಗಣಪತಿ: ಆವರಣದ ಎದುರಿನಲ್ಲಿ ಬಾಲರಾಮನ ವಿಗ್ರಹ: ಒಳಗಡೆ ವಿಷ್ಣುವಿನ ದಶಾವತಾರದ ಸ್ಥಬ್ದ ಮೂರ್ತಿ
ಹೊನ್ನಾವರ: ಪಟ್ಟಣದ ಪಟ್ಟಣ ಪಂಚಾಯತ್ ನಲ್ಲಿ 56 ನೇ ವರ್ಷದ ವಿಶ್ವ ಹಿಂದುಪರಿಷತ್ ಸಾರ್ವಜನಿಕ ಗಣೇಶೋತ್ಸವ ವಿಜೃಂಭಣೆಯಿAದ ನಡೆಯುತ್ತಿದ್ದು, ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ವಿಶಾಲವಾದ ಮಂಟಪ, ಆವರಣದ ಎದುರಿನಲ್ಲಿ ಬಾಲರಾಮನ ಮೂರ್ತಿ, ಮತ್ತು ಆವರಣದ ಒಳಗಡೆ ವಿಷ್ಣುವಿನ ದಶಾವತಾರದ ಸ್ಥಬ್ದ ಮೂರ್ತಿಯು ನೋಡುಗರನ್ನು ಹುಬ್ಬೇರಿಸುವಂತಿದೆ.
ಈ ಬಗ್ಗೆ ಮಾತನಾಡಿದ ವಿಶ್ವ ಹಿಂದುಪರಿಷತ್ತಿನ ಸಾರ್ವಜನಿಕ ಗಣೇಶೋತ್ಸವದ ಸಮಿತಿಯ ಅಧ್ಯಕ್ಷರಾದ ಸಂಜಯ ಶೇಟ , ನಮ್ಮ ಸಾರ್ವಜನಿಕ ಗಣೇಶೋತ್ಸವನ್ನು ಪ್ರತಿವರ್ಷವು ವಿಜೃಂಭಣೆಯಿoದ ನಡೆಸಿಕೊಂಡು ಬರಲಾಗುತ್ತಿದೆ.. ಅನೇಕ ಯುವಕರ ತಂಡ, ಹಾಗೂ ಇತರ ಎಲ್ಲಾ ಹಿಂದೂ ಸಂಘಟನೆ, ಹಿಂಧೂಸಮಾಜವು ಕೈಜೋಡಿಸುತ್ತಿದ್ದು ಉತ್ಸವವನ್ನು ಸಂಭ್ರಮದಿoದ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು,.
ಇನ್ನೂ ವಿಶ್ವ ಹಿಂದುಪರಿಷತ್ ನ ಸಮಿತಿಯ ಕಾರ್ಯಕರ್ತರಾದ ವಿಶ್ವನಾಥ ನಾಯಕ ಮಾತನಾಡಿ, ಜಿಲ್ಲೆಯಲ್ಲೇ ಪ್ರಪ್ರಥಮವಾಗಿ ಸ್ಥಾಪಿತ ಗಣೇಶೋತ್ಸವ ಇದಾಗಿದ್ದು, ಹಿಂದೂಸಮಾಜದವರ ಸಹಕಾರದಿಂದ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಿಶ್ವ ಹಿಂದುಪರಿಷತ್ ನ ಸಮಿತಿಯ ರಾಕೇಶ್ ಶೇಟ, ನಿತೇಶ ಶೇಟ, ಸಿದ್ದಾರ್ಥ ಕಾಮತ್, ಗಣಪತಿ ಕಾಮತ, ರಾಘವೇಂದ್ರ ಸಾಳೆಹಿತ್ತಲ, ಇನ್ನುಳಿದ ಕಾರ್ಯಕರ್ತರು ಹಾಜರಿದ್ದರು.
ಇದೇ ವೇಳೆ, ಇನ್ನೂ ಪಟ್ಟಣದ ನ್ಯೂ ಇಂಗ್ಲೀಷ ಶಾಲೆಯಲ್ಲಿ ಗೇರುಸೊಪ್ಪದ ಬಂಗಾರ ಕುಸುಮ ಫಾಲ್ಸ್ ನಡುವೆ ಕುಳಿತ ಗಣಪನನ್ನು ಕೂರಿಸಲಾಗಿದ್ದು, ನೈಸರ್ಗಿಕ ತಾಣದ ಸೊಬಗನ್ನು ಸಾರ್ವಜನಿಕರಿಗೆ ಪರಿಚಯಿಸಿದ್ದು, ಆಕರ್ಷಣಿಯ ಬಿಂದುವಾಗಿದೆ. ಓಟ್ಟಿನಲ್ಲಿ ತಾಲೂಕಿನಲ್ಲಿ ಗಣಪನನ್ನು ನೋಡಲು ಸಾರ್ವಜನಿಕ ಹರಿದುಬರುತ್ತಿದೆ.