Follow Us On

WhatsApp Group
Important
Trending

ದಾರಿಯಲ್ಲಿ ಸಿಕ್ಕಿದ ಮಾಂಗಲ್ಯ ಸರವನ್ನು ಮರಳಿ ನೀಡಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ

ಶಿರಸಿ: ಬಂಗಾರದ ಮಾಂಗಲ್ಯ ಸರ ಕಳೆದುಕೊಂಡು ಬೆಂಗಳೂರು ಬಸ್ ಹತ್ತಿದ ಮಹಿಳೆಗೆ ಕೊನೆಗೂ ತಾಳಿ ಮರಳಿ ಸಿಗುವಂತಾಗಿದೆ. ಶಿರಸಿ ತಾಲೂಕಿನ ಬಕ್ಕಳ ಗ್ರಾಮದ ಲತಾ ಭಟ್ ಅವರು, ಶಿವಾಜಿ ಚೌಕ್ ಬಳಿಯಿರುವ ಮಾರ್ಕೆಟ್‌ನಲ್ಲಿ ಗಣಪತಿಯನ್ನು ನೋಡಿ ಬಸ್ ನಿಲ್ದಾಣಕ್ಕೆ ಹೋಗುವ ವೇಳೆ ರಸ್ತೆ ಮಧ್ಯ ಸರ ಕಳೆದುಕೊಂಡಿದ್ದರು. 15 ಗ್ರಾಂ. ತೂಕದ ಸುಮಾರು 1.30 ಲಕ್ಷ ರೂಪಾಯಿ ಬೆಲೆಯ ಮಾಂಗಲ್ಯ ಸರ ಇದಾಗಿತ್ತು.

ಇದನ್ನೂ ಓದಿ: ಇಲ್ಲಿದೆ ಉದ್ಯೋಗಾವಕಾಶ: ಕೊಂಕಣ ರೈಲ್ವೆ ನೇಮಕಾತಿ: ಡಿಪ್ಲೋಮಾ, ಐಟಿಐ ಆದವರು ಅರ್ಜಿ ಸಲ್ಲಿಸಿ: 45 ಸಾವಿರ ವೇತನ

ಈ ಸರವು ಶಿರಸಿಯ ಪವನ್ ರಾಮದಾಸ ಎಂಬುವರಿಗೆ ಸಿಕ್ಕಿತ್ತು. ಪ್ರಾಮಾಣಿಕತೆ ಮೆರೆದ ಅವರು ಕೂಡಲೇ ಪೋಲಿಸರಿಗೆ ಚಿನ್ನದ ಸರ ಒಪ್ಪಿಸಿದ್ದರು. ಮಾಂಗಲ್ಯ ಸಿಕ್ಕ ಮಾಹಿತಿ ತಿಳಿದ ಲತಾ ಸಹೋದರ ಪೊಲೀಸ್ ಠಾಣೆಗೆ ಬಂದು ದಾಖಲೆ ನೀಡಿ ಚೈನ್ ಪಡೆದುಕೊಂಡಿದ್ದಾರೆ. ಪಿಎಸ್‌ಐ ನಾಗಪ್ಪ ಬಿ ಅವರು ಲತಾ ಸಹೋದರನಿಗೆ ತಾಳಿ ಒಪ್ಪಿಸಿದ್ದು, ಪವನ್ ಅವರಿಗೆ ಡಿವೈಎಸ್‌ಪಿ ಗಣೇಶ ಕೆ.ಎಲ್ ಹಾಗು ಲತಾ ಭಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. .

ವಿಸ್ಮಯ ನ್ಯೂಸ್, ಶಿರಸಿ

Back to top button