Follow Us On

WhatsApp Group
Important
Trending

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಲಕ್ಷಾಂತರ ರೂಪಾಯಿ ನಗದು ಕಳ್ಳತನ : ಕ್ಯಾಮೆರಾ ಬದಿಗೆ ಸರಿಸಿ, ಡಿವಿಆರ್ ನಾಶಪಡಿಸಿದ ಚಾಲಾಕಿ ಕಳ್ಳರು

ಅಂಕೋಲಾ: ತಾಲೂಕಿನ ಪುರಸಭೆ ವ್ಯಾಪ್ತಿಯ ಖಾಸಗಿ ಶಿಕ್ಷಣ ಸಂಸ್ಥೆ ಒಂದರ 2 ಪ್ರತ್ಯೇಕ ವಿಭಾಗದಲ್ಲಿ ಭಾರೀ ಪ್ರಮಾಣದ ಕಳ್ಳತನ ಕೃತ್ಯ ನಡೆದಿದ್ದು ಒಟ್ಟಾರೆಯಾಗಿ ಲಕ್ಷಾಂತರ ರೂಪಾಯಿ ನಗದು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ದಿವಂಗತ ಜಗದೀಶ್ ಮಾಸ್ತರ ಎನ್ನುವವರು ಕಟ್ಟಿ ಬೆಳೆಸಿದ್ದ ಪೂರ್ಣಪ್ರಜ್ಞ ಎನ್ನುವ ಶಿಕ್ಷಣ ಸಂಸ್ಥೆ ,ತಾಲೂಕಿನ ಹಾಗೂ ಇತರೆಡೆಯ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಜ್ಞಾನ ದೀಪವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಹಿರಿಮೆ ಹೊಂದಿತ್ತು.

ಇದನ್ನೂ ಓದಿ: ಇಲ್ಲಿದೆ ಉದ್ಯೋಗಾವಕಾಶ: ಕೊಂಕಣ ರೈಲ್ವೆ ನೇಮಕಾತಿ: ಡಿಪ್ಲೋಮಾ, ಐಟಿಐ ಆದವರು ಅರ್ಜಿ ಸಲ್ಲಿಸಿ: 45 ಸಾವಿರ ವೇತನ

ಇತ್ತೀಚೆಗೆ ಅವರು ಕಾಲ ವಶರಾಗಿದ್ದು,ಹೊಸ ಆಡಳಿತ ಮಂಡಳಿಯೊಂದಿಗೆ ಹಿರಿ-ಕಿರಿಯರು ಸೇರಿ ಈ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಬುಧವಾರ ಎಂದಿನಂತೆ ಶಾಲಾ ಕಾಲೇಜು ಮುಗಿಸಿ ಮನೆಗೆ ಮರಳಿದ್ದ,ಸಂಸ್ಥೆಯ ಸಿಬ್ಬಂದಿಗಳು, ಬೆಳಿಗ್ಗೆ ಎದ್ದು ಬಂದು ನೋಡುವಷ್ಟರಲ್ಲಿ ಕಳ್ಳತನ ವಾಗಿರುವುದು ಗಮನಕ್ಕೆ ಬಂದಿದೆ.

ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳ ಪರಿಶೀಲಿಸಿ,ಪ್ರಾಥಮಿಕ ತನಿಖೆ ಕೈಗೊಂಡಿರುವ ಪೊಲೀಸರು,ಕಾರವಾರದಿಂದ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ತನಿಖೆ ಚುರುಕುಗೊಳಿಸಿದ್ದಾರೆ. ಪೂರ್ಣ ಪ್ರಜ್ಞಾ ಕರುಣ ವಿಜ್ಞಾನ ಪದವಿ ಪೂರ್ವ ಕಾಲೇಜ್ ನ ಕೆಳಮಹಡಿಯಲ್ಲಿರುವ ಪ್ರಾಚಾರ್ಯರ ಕೊಠಡಿ ಇಲ್ಲವೇ ಕಾಲೇಜ ಮುಖ್ಯ ಕಛೇರಿಯಲ್ಲಿ ,ವಿದ್ಯಾರ್ಥಿಗಳ ಫೀ ಹಣ ಸೇರಿದಂತೆ ಸುಮಾರು ಒಂದುವರೆ ಲಕ್ಷಕ್ಕೂ ಹೆಚ್ಚು ನಗದು ಇತ್ತು ಎನ್ನಲಾಗಿದ್ದು,ಡೋರ್ ಲಾಕ್ ಕತ್ತರಿಸಿ ಒಳ ನುಗ್ಗಿದ ಕಳ್ಳರು ಅಲ್ಲಿರುವ ಹಣ ಕಳ್ಳತನ ಮಾಡಿದ್ದಾರೆ.

ಈ ವೇಳೆ ಪ್ರವೇಶ ದ್ವಾರದ ಬಳಿ ಇರುವ ಸಿ.ಸಿ ಕ್ಯಾಮರಾವನ್ನು ಮೇಲೆ ಸರಿಸಿದಂತೆ ಕಂಡು ಬರುತ್ತಿದ್ದು,ಆಫೀಸ್ ನಲ್ಲಿದ್ದ ಡಿ. ವಿ. ಆರ್ ಬಾಕ್ಸ್ ನ್ನು ನಾಶಪಡಿಸಿ ತಮ್ಮ ಕಳ್ಳತನ ಕೃತ್ಯದ ದ್ರಶ್ಯಾವಳಿಗಳು ಬಯಲಾಗದಂತೆ ಖತರ್ನಾಕ್ ಬುದ್ಧಿ ಉಪಯೋಗಿಸಿದಂತಿದೆ.ಅದರ ಪಕ್ಕವೇ ಇರುವ ಹೊಸ ಕಟ್ಟಡದಲ್ಲಿದ್ದ ಪ್ರಿ ಪ್ರೈಮರಿ ಮತ್ತಿತರ ಹಂತದ ಆಫೀಸ್ ಕಚೇರಿಯ ಒಳ ನುಗ್ಗಿ ಅಲ್ಲಿಯೊ ಇದೇ ರೀತಿ ಕೃತ್ಯ ಎಸಗಿ, ಅಲ್ಲಿಯೂ ಇತ್ತನ್ನಲ್ಲಾದ ಹತ್ತಿಪ್ಪತ್ತು ಸಾವಿರ ರೂ ಕಳ್ಳತನ ಮಾಡಿ, ಕಳ್ಳತನ ಸಾಕ್ಷ್ಯ ನಾಶಮಾಡಲು ಸಿಸಿಟಿವಿ ಡಿ ವಿ ಆರ್ ಬಾಕ್ಸ್ ಒಡೆದು, ಹಾನಿ ಮಾಡಿ ಪರಾರಿಯಾಗಿದ್ದಾರೆ.

ಒಟ್ಟಾರೆಯಾಗಿ ಎರಡು ವಿಭಾಗಗಳಿಂದ ಸೇರಿ 1,75,000 ದಿಂದ 2,00,000 ವರೆಗೆ ನಗದು ಕಳ್ಳತನವಾಗಿರುವ ಸಾಧ್ಯತೆ ಕೇಳಿಬಂದಿದ್ದು,ಈ ಕುರಿತು ನಿಖರ ಮಾಹಿತಿ ತಿಳಿದು ಬರಬೇಕಿದೆ. ವಿದ್ಯಾರ್ಥಿಗಳ ಸಮವಸ್ತ್ರ ಮತ್ತಿತರ ಹಣ ಸೇರಿದಂತೆ ಇರುವ ಲಕ್ಷಾಂತರ ರೂಪಾಯಿ ಹಣದ ಮಾಹಿತಿ ಇರುವ ಸ್ಥಳೀಯರಾರೋ ಈ ಕೃತ್ಯ ಎಸಗಿರಬಹುದೇ ? ಅಥವಾ ಅವರ ಮಾಹಿತಿ ಆಧರಿಸಿ ಇತರರು ಕಳ್ಳತನ ಕೃತ್ಯ ನಡೆಸಿರಬಹುದೇ? ಅಥವಾ ಇವೆಲ್ಲವನ್ನೂ ಹೊರಗಿನವರೇ ಬಂದು ಮಾಡಲು ಸಾಧ್ಯವೇ? ಅಷ್ಟಕ್ಕೂ ಶಿಕ್ಷಣ ಸಂಸ್ಥೆಯಲ್ಲಿ ಇಷ್ಟೊಂದು ಮೊತ್ತದ ಹಣ ಇಡುವುದು ಎಷ್ಟು ಸೂಕ್ತ? ಹಣ ಇರುವ ಮಾಹಿತಿ ಯಾರಿಗೆಲ್ಲ ಇತ್ತು ಎಂಬಿತ್ಯಾದಿ ನಾನ ರೀತಿಯ ಅನುಮಾನದ ಮಾತುಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾದಂತಿದ್ದು,ಪೊಲೀಸರು ತನಿಖೆ ಚುರುಕುಗೊಳಿಸಿ,ಕಳ್ಳರ ಜಾಡು ಪತ್ತೆ ಹಚ್ಚಿ ಯಾರೇ ಕಾದುನೋಡಬೇಕಿದೆ.

ಶಿಕ್ಷಣ ಸಂಸ್ಥೆ ಒಂದರಲ್ಲಿ ನಡೆದ ಈ ಭಾರೀ ಕಳ್ಳತನ ಭೇದಿಸುವುದು ಪೊಲೀಸರಿಗೂ ಸವಾಲಿನ ಕೆಲಸವಾಗಿದೆ.ಕಳ್ಳತನ ಕೃತ್ಯದ ಕುರಿತಂತೆ ಹೆಚ್ಚಿನ ಮತ್ತು ಅಧಿಕೃತ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button