Follow Us On

WhatsApp Group
Important
Trending

ಲಿಪ್ಟ್ ನಲ್ಲಿ ಸುಲುಕಿ ಕಾರ್ಮಿಕ ಸಾವು

ಕುಮಟಾ: ಲಿಪ್ಟ್ ನಲ್ಲಿ ಆದ ತಾಂತ್ರಿಕದೋಷದಿoದ ಎದೆಯ ಬಾಗ ಸಿಲುಕಿಕೊಂಡ ಪರಿಣಾಮ ಕಾರ್ಮಿನಕನೋರ್ವ ಮೃತಪಟ್ಟ ಘಟನೆ ಕುಮಟಾ ಪಟ್ಟಣದ ಸುಭಾಷ್ ರಸ್ತೆಯ ಜಗದಂಬಾ ಇಲೆಕ್ಟ್ರಿಕಲ್ಸ್ ನಲ್ಲಿ ನಡೆದಿದೆ. ರಾಜಸ್ಥಾನದ ಜೋದಪುರ್ ನಿವಾಸಿ ಗೋಪಾಲ್ ಸಿಂಗ್ ಎಂಬಾತನೇ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಈತ ಜಗದಂಬಾ ಇಲೆಕ್ಟ್ರಿಕಲ್ಸ್ ನಲ್ಲಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಇಲ್ಲಿದೆ ಉದ್ಯೋಗಾವಕಾಶ: ಕೊಂಕಣ ರೈಲ್ವೆ ನೇಮಕಾತಿ: ಡಿಪ್ಲೋಮಾ, ಐಟಿಐ ಆದವರು ಅರ್ಜಿ ಸಲ್ಲಿಸಿ: 45 ಸಾವಿರ ವೇತನ

ಈತ ಗ್ರಾಹಕರಿಗೆ ಬೇಕಾದ ಸಾಮಾಗ್ರಿಗಳನ್ನು ತರಲು ಮೆಟ್ಟಿಲುಗಳ ಮೂಲಕ ಮೇಲಿನ ಮಹಡಿಗೆ ತೆರಳಿದ್ದು, ಬಳಿಕ ಅಲ್ಲಿಂದ ಸಾಮಾಗ್ರಿಗಳನ್ನು ಲಿಪ್ಟ್ ನಲ್ಲಿ ಹಾಕಿಕೊಂಡು ಕೆಳಗಡೆ ಬರುವಾಗ ತಾಂತ್ರಿಕದೋಷದಿoದ ಲಿಪ್ಟ್ ನ ಬಾಗಿಲಲ್ಲಿ ಎದೆ ಸಿಲುಕಿಕೊಂಡಿದೆ ಎನ್ನಲಾಗಿದೆ. ಈ ವೇಳೆ ಹೊರಬರಲಾಗದೆ ಸ್ಥಳದಲ್ಲಿ ಮೃತಪಟ್ಟಿರುದುದಾಗಿ ತಿಳಿದು ಬಂದಿದೆ. ಘಟನೆ ಸಂಭoದಿಸಿದoತೆ ಇನ್ನೋರ್ವ ಕಾರ್ಮಿಕ ಉದಯ ಮಹಾದೇವ ನಾಯ್ಕ ಎನ್ನುವವರು ಕುಮಟಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ನಾಗೇಶ್ ದಿವಗಿ ಕುಮಟಾ

Back to top button