Important
Trending

ತುಪ್ಪದ ಬೆಡಗಿ ರಾಗಿಣಿಗೆ ಬೆವರಿಳಿಸುತ್ತಿರುವ ಜಿಲ್ಲೆಯ ಮಹಿಳಾ ಅಧಿಕಾರಿ ಯಾರು ಗೊತ್ತಾ?Anjumala Nayak CCB

Sandalwood Drug Mafia News

  • ನಟಿ ರಾಗಿಣಿಯ ತನಿಖೆಯ ತಂಡದ ನೇತೃತ್ವ ವಹಿಸಿರುವುದು ಜಿಲ್ಲೆಯ ದಕ್ಷ ಮಹಿಳಾ ಅಧಿಕಾರಿ
  • ಖಡಕ್ ಆಡಳಿತಕ್ಕೆ ಹೆಸರಾದವರು ಈ ಮಹಿಳಾ ಅಧಿಕಾರಿ
[sliders_pack id=”1487″]

ಅಂಕೋಲಾ: ಡ್ರಗ್ಸ್ ಮಾಫಿಯಾ ಇಡೀ ಸ್ಯಾಂಡಲ್ ವುಡ್ ಜೊತೆಗೆ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದ್ದು, ಹಲವು ಮಹತ್ವದ ಸುಳಿವು ಲಭ್ಯವಾಗುತ್ತಿದೆ. ಜೊತೆಗೆ ಖ್ಯಾತ ನಟ-ನಟಿಯರು, ರಾಜಕಾರಣಿಗಳ ಮಕ್ಕಳ ಹೆಸರು ಕೇಳಿಬರುತ್ತಿದೆ. ಈಗಾಗಲೇ ತುಪ್ಪದ ಬೆಡಗಿ ಖ್ಯಾತಿಯ ನಟಿ ರಾಗಿಣಿ ದ್ವಿವೇದಿ ಮನೆಗೆ ಸಿ.ಸಿ.ಬಿ ಅಧಿಕಾರಿಗಳು ದಾಳಿ ನಡೆಸಿ, ಆಕೆಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ನಟಿ ರಾಗಿಣಿಯ ತನಿಖೆಯ ತಂಡದ ನೇತೃತ್ವ ವಹಿಸಿದ್ದು, ಉತ್ತರಕನ್ನಡ ಜಿಲ್ಲೆಯ ಮಹಿಳಾ ಅಧಿಕಾರಿ ಎಂಬುದು ವಿಶೇಷ.


ರಾಗಿಣಿ ತನಿಖೆಯ ತಂಡದ ನೇತೃತ್ವ ವಹಿಸಿದ್ದ ಮಹಿಳಾ ಅಧಿಕಾರಿ ಅಂಜುಮಾಲಾ ನಾಯಕ ನಮ್ಮ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನವರು ಎಂಬುದು ವಿಶೇಷ. ಜಿಲ್ಲೆಯ ಅಂಕೋಲಾ ತಾಲೂಕಿನ ಶಿರಗುಂಜಿಯ ನಿವೃತ್ತ ಶಿಕ್ಷಕರಾದ ತಿಮ್ಮಣ್ಣ ನಾಯಕ ಹಾಗೂ ಶಾಂತಿ ನಾಯಕ ದಂಪತಿಯ ಪುತ್ರಿಯಾದ ಅಂಜುಮಾಲ ನಾಯಕ 2000 ನೆಯ ಇಸವಿಯಲ್ಲಿ ಜಿಲ್ಲೆಯ ಮೊದಲ ಮಹಿಳಾ ಪಿ.ಎಸ್.ಐ ಆಗಿ ಪೊಲೀಸ್ ಇಲಾಖೆಯನ್ನು ಪ್ರವೇಶಿಸಿದ್ದರು. ಆರಂಭದಿoದಲೂ ಖಡಕ್ ಆಡಳಿತಕ್ಕೆ ಹೆಸರಾಗಿ, ಅಪಾರ ಜನಸ್ನೇಹಿ ಅಧಿಕಾರಿಯಾಗಿ, ಗಮನಸೆಳೆದಿದ್ದರು.


ಈಗ ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾವನ್ನು ಸಿ.ಸಿ.ಬಿಯು ವಿಚಾರಣೆಯನ್ನು ಕೈಗೆತ್ತಿಕೊಂಡಿರುವಾಗ ಪ್ರಮುಖವಾಗಿ ಕೇಳಿಬಂದಿದ್ದು, ಇದೇ ಅಂಜುಮಾಲಾ ನಾಯಕ ಹೆಸರು. ಅಂಕೋಲಾದ ಪ್ರಸಿದ್ಧ ಶಾಂತಿ ದಂತ ಚಿಕಿತ್ಸಾಲಯದ ವೈದ್ಯ ಡಾ.ಸಂಜು ನಾಯಕ, ಇವರ ಸಹೋದರರರು. ಅಂಜುಮಾಲಾ ನಾಯಕ ಮುಖ್ಯಮಂತ್ರಿ ಬಂಗಾರದ ಪದಕ ಬಲಿದಿದ್ದು, ರಾಜ್ಯದ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ ಗೂ ಭಾಜನರಾಗಿದ್ದಾರೆ.


ಈಗ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾದ ತನಿಖೆಯಲ್ಲಿ ನಮ್ಮ ಉತ್ತರಕನ್ನಡ ಜಿಲ್ಲೆಯ ಮಹಿಳಾ ಅಧಿಕಾರಿ ಇರುವುದು ಎಲ್ಲರಿಗೂ ಹೆಮ್ಮೆಯ ವಿಷಯ. ಅವರ ಪ್ರಾಮಾಣಿಕ, ದಕ್ಷ ಕಾರ್ಯಕ್ಕೆ ಪ್ರೋತ್ಸಾಹ ನೀಡಿ ಬೆಂಬಲಿಸೋಣ.

ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ

ಚಿಂತಿಸುವ ಅವಶ್ಯಕತೆ ಇಲ್ಲ, ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ

ಶ್ರೀ ಕೇರಳ, ಕರಾವಳಿ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು.
ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ:-8884997762

( ಜಾಹೀರಾತು )

Back to top button