Big NewsImportant
Trending

ವಿಳಾಸ ಕೇಳುವ ನೆಪಮಾಡಿಕೊಂಡು ಐದಾರುಕಡೆ ರಸ್ತೆಯಲ್ಲಿ ಹೋಗುತ್ತಿದ್ದವರ ದರೋಡೆ: ಒಬ್ಬಂಟಿ ವ್ಯಕ್ತಿ, ಬೈಕ್ ಸವಾರರೇ ಇವರ ಟಾರ್ಗೆಟ್

ಶಿರಸಿ : ಬೈಕಿನಲ್ಲಿ ಬರುವ ಅಪರಿಚತರ ತಂಡವೊoದು ರಸ್ತೆಗಳಲ್ಲಿ ಒಬ್ಬಂಟಿ ಬೈಕ್ ಸವಾರರನ್ನು ಅಡ್ಡಗಟ್ಟಿ ದರೋಡೆ ಮಾಡಿ ಪರಾರಿಯಾಗಿರುವ ಐದಾರು ಪ್ರಕರಣ ತಾಲೂಕಿನಲ್ಲಿ ನಡೆದಿದ್ದು, ಸಾರ್ವಜನಿಕರು ಆತಂಕಗೊಳ್ಳುವoತೆ ಮಾಡಿದೆ. ಕುಮಟಾ-ಶಿರಸಿ ರಸ್ತೆಯ ಹೆಗಡೆಕಟ್ಟಾ ಕ್ರಾಸ್, ಬನವಾಸಿಯ ಬಿದ್ರಳ್ಳಿ ಸೇತುವೆ ಸಮೀಪ, ಶಿರಸಿ ಮಕ್ಕಿ ಕ್ರಾಸ್ ಸೇರಿದಂತೆ ಹಲವೆಡೆ ಒಬ್ಬಂಟಿಗರನ್ನೇ ಟಾರ್ಗೆಟ್ ಮಾಡಿ, ಮೊಬೈಲ್ ಮತ್ತು ಹಣವನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ.

ಬಾಲಕನ ಅಪಹರಣ ಪ್ರಕರಣ: ಮಾಸ್ಟರ್ ಮೈಂಡ್ ಬಂಧನ: ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡ ಬಾಲಕನ ಅಜ್ಜ!

ಕೆಲವೊಮ್ಮೆ ವಿಳಾಸಕೇಳುವ ನೆಪಮಾಡಿಕೊಂಡು, ಅವರನ್ನು ಬೆದರಿಸಿ, ಹಣಕಿತ್ತು ಸ್ಥಳದಿಂದ ಪರಾರಿಯಾಗುತ್ತಿದ್ದಾರೆ ದುಷ್ಕರ್ಮಿಗಳು. ಇದೇ ವೇಳೆ, ವ್ಯಾಪಾರ ಮಾಡಿಕೊಂಡು ಹಣ ತೆಗೆದುಕೊಂಡು ಮನೆಗೆ ತೆರಳುತ್ತಿದ್ದ ಬೈಕ್ ಸವಾರನನ್ನು ಅಡ್ಡ ಗಟ್ಟಿ 19 ಸಾವಿರ ದೋಚಿಕೊಂಡು ಹೋದ ಘಟನೆ ತಾಲೂಕಿನ ಬನವಾಸಿ ರಸ್ತೆಯ ಬಿದ್ರಳ್ಳಿ ಸೇತುವೆ ಮೇಲೆ ನಡೆದಿದೆ. ಶ್ರೀಕಾಂತ ಗಣೇಶ ಕಬ್ಬೇರ ಕಡಗೋಡ ಹಣ ಕಳೆದುಕೊಂಡವರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳು ಶಿರಸಿಗೆ ಭೇಟಿ ನೀಡಿದ್ದು, ತನಿಖೆ ಚುರುಕುಗೊಂಡಿದೆ. ದುಷ್ಕರ್ಮಿಗಳ ಬಂಧನಕ್ಕೆ ಈಗಾಗಲೇ ತಂಡವೊoದನ್ನು ರಚಿಸಲಾಗಿದೆ.

ಬನವಾಸಿಯಲ್ಲೂ ಇಂತಹದೇ ಪ್ರಕರಣ ನಡೆದಿದ್ದು, ತೋಟಕ್ಕೆ ನೀರು ಬಿಟ್ಟು ತಿರುಗಿ ಬರುವಾಗ ಬೈಕ್‌ನಲ್ಲಿ ಬಂದ ಮೂರು ಜನ ಯಾವದೋ ರಸ್ತೆ ಕೇಳುವ ನೆಪದಲ್ಲಿ ಹತ್ತಿರ ಬಂದು, ತಕ್ಷಣ ಅವರ ಎರಡು ಕೈ ಹಿಡಿದುಕೊಂಡು , ಹಣ ಕೀಳಲು ಮುಂದಾಗಿದ್ದಾರೆ. ಮುಖದಲ್ಲಿ ಮಂಕಿ ಕ್ಯಾಪ್ ಹಾಕಿ ಕೊಂಡಿರುವುದಕ್ಕೆ ಗುರುತು ಸಿಕ್ಕಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ದರೋಡೆ ಪ್ರಕರಣ ತಾಲೂಕಿನ ಜನರು ಭಯಪಡುವಂತೆ ಮಾಡಿದೆ. ಪೊಲೀಸರು ಆದಷ್ಟು ಬೇಗ, ದುಷ್ಕರ್ಮಿಗಳನ್ನು ಹೆಡೆಮುರಿ ಕಟ್ಟಬೇಕಿದೆ ಎಂಬ ಆಗ್ರಹ ಕೇಳಿಬಂದಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button