Big NewsImportant
Trending

ಬಾಲಕನ ಅಪಹರಣ ಪ್ರಕರಣ: ಮಾಸ್ಟರ್ ಮೈಂಡ್ ಬಂಧನ: ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡ ಬಾಲಕನ ಅಜ್ಜ!

ಭಟ್ಕಳ: ಎಂಟು ವರ್ಷದ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನು ಭಟ್ಕಳ ನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ, ಅಬ್ದುಲ್ ಹನಾನ್ ಮೊಹ್ಮದ ಜಾಫರ್ ಕಡದಾರಿ ಎಂದು ತಿಳಿದು ಬಂದಿದೆ.ಕಳೆದ ಆಗಸ್ಟ್ 20 ರಂದು ಅಜಾದ್ ನಗರದ 1 ಕ್ರಾಸ್ ಸಮೀಪ ಕೊಕ್ತಿ ನಗರದಲ್ಲಿ ಕಾರಿನಲ್ಲಿ ಬಂದ ಬಾಲಕನನ್ನು ಅಪಹರಣ ಮಾಡಿದ್ದರು. ಬಳಿಕ ಗೋವಾದ ಕಲ್ಲಂಗುಟ ಬೀಚ್ ಸಮೀಪ ಬಾಲಕನನ್ನು ಪತ್ತೆ ಹಚ್ಚಿ ಭಟ್ಕಳಕ್ಕೆ ಕರೆ ತಲಾಗಿತ್ತು.

ಗಂಡನ ಅನುಮಾನಕ್ಕೆ ಬಲಿಯಾದ ಹೆಂಡತಿ: ಸಾವಿಗೆ ಶರಣಾದ ವಿವಾಹಿತೆ

ಬಳಿಕ ಇಬ್ಬರು ಆರೋಪಿಯನ್ನು ಬಂಧಿಸುವಲ್ಲಿ ಭಟ್ಕಳ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಇದೀಗ ಅಪಹರಣದ ಮಾಸ್ಟರ್ ಮೈಂಡ್ ಆರೋಪಿ ಅಬ್ದುಲ್ ಹನಾನ್ ಮೊಹ್ಮದ ಜಾಫರ್ ಕಡದಾರಿ ಹೊರ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದವನನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣ ಮೂವರು ಆರೋಪಿಯನ್ನು ಬಂದಿಸಿದ್ದು, ಇನ್ನೋರ್ವ ಆರೋಪಿ ಬಾಲಕನ ಅಜ್ಜ ಸೌದಿ ಅರಿಬ್ಬಿಯಾದಲ್ಲಿ ತಲೆ ಮರೆಸಿಕೊಂಡಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Related Articles

Back to top button