Follow Us On

WhatsApp Group
Important
Trending

ಜಿಂಕೆ ಬೇಟೆ: 33 ಕೆ.ಜಿ ಮಾಂಸ ವಶಕ್ಕೆ: ಆರೋಪಿ ಬಂಧನ

ಯಲ್ಲಾಪುರ: ಬೇಟೆಯಾಡಿ ಜಿಂಕೆ ಕೊಂದ ಆರೋಪದ ಮೇಲೆ ಅರಣ್ಯ ಇಲಾಖೆಯವರು ತಾಲೂಕಿನ ಮದನೂರು ಗ್ರಾಮದ ಹುಲಗೋಡಿನ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತನಿoದ ಮನೆಯಲ್ಲಿದ್ದ ಜಿಂಕೆ ಕಾಲು, ತಲೆ, ಚರ್ಮ ಹಾಗು 33 ಕೆ.ಜಿ ಮಾಂಸ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿ ರಮೇಶ ನಾಗೇಶ ಗಾಂವ್ಕರ ಎಂದು ತಿಳಿದುಬಂದಿದೆ.

ಕೊಂಕಣ ರೈಲ್ವೆ ನೇಮಕಾತಿ: ಡಿಪ್ಲೋಮಾ, ಐಟಿಐ ಆದವರು ಅರ್ಜಿ ಸಲ್ಲಿಸಿ: 45 ಸಾವಿರ ವೇತನ

ಈ ಕೃತ್ಯದಲ್ಲಿ ಭಾಗಿಯಾದ ಇತರ ಆರೋಪಿಗಳನ್ನು ಬಂಧಿಸಲು ಅರಣ್ಯ ಇಲಾಖೆಯವರು ಬಲೆ ಬಿಸಿದ್ದಾರೆ. ಯಲ್ಲಾಪುರ ಉಪ ಸಂರಕ್ಷಣಾದಿಕಾರಿಗಳಾದ ಹರ್ಷ ಬಾನು ಹಾಗು ಸಹಾಯಕ ಅರಣ್ಯ ಸಂರಕ್ಷಣಾದಿಕಾರಿಗಳಾದ ಹಿಮವತಿ ಭಟ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಕಾರ್ಯಚರಣೆಯಲ್ಲಿ ವಲಯ ಅರಣ್ಯ ಅದಿಕಾರಿಗಳೊಂದಿಗೆ ಉಪ ವಲಯ ಅರಣ್ಯಾದಿಕಾರಿಗಳಾದ ಆನಂದ, ವಿನಯ, ಮಂಜುನಾಥ , ಪ್ರಕಾಶ, ಕಿರಣಕುಮಾರ ಹಾಗು ಎಲ್ಲಾ ವಲಯದ ಗಸ್ತು ವನಪಾಲಕರು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button