Important
Trending

ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ನ ಟ್ಯಾಂಕ್ ಕಳಚಿ ಹೆದ್ದಾರಿಯಲ್ಲಿ ಬಿತ್ತು! ತಪ್ಪಿತು ಸಂಭಾವ್ಯ ದುರಂತ

ಯಲ್ಲಾಪುರ: ಚಲಿಸುತಿದ್ದ ಗ್ಯಾಸ್ ಟ್ಯಾಂಕರ್ ನ ಟ್ಯಾಂಕ್ ಕಳಚಿ ಹೆದ್ದಾರಿಯಲ್ಲಿ ಬಿದ್ದ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಅರಬೈಲ್ ಘಟ್ಟದಲ್ಲಿ ಇಂದು ನಡೆದಿದೆ. ಮಂಗಳೂರಿನಿoದ ಹುಬ್ಬಳ್ಳಿ ಕಡೆ ಭಾರತ್ ಗ್ಯಾಸ್ ಕಂಪನಿಯ ಗ್ಯಾಸ್ ತುಂಬಿದ ಟ್ಯಾಂಕರ್, ಅರಬೈಲ್ ಘಟ್ಟದಲ್ಲಿ ಚಲುಸುತಿದ್ದಾಗ ಟ್ಯಾಂಕರ್ ನ ಕೊಂಡಿ ಕಳಚಿದ್ದರಿಂದ ಚಲಿಸುತ್ತಿರುವಾಗಲೇ ಹೆದ್ದಾರಿಗೆ ಬಿದ್ದಿದೆ.

ಹೆದ್ದಾರಿ ನಿರ್ವಹಣೆ ಅಧಿಕಾರಿ ಮುರುಗೇಶ್ ರವರು ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ , ಪೊಲೀಸರು ಕೂಡಲೇ ಆಗಮಿಸಿ ಸಂಭಾವ್ಯ ಅನಾಹುತ ತಡೆದಿದ್ದಾರೆ. ಘಟನೆಯಿಂದಾಗಿ ಹುಬ್ಬಳ್ಳಿ-ಅಂಕೋಲ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಕೆಲ ಸಮಯ ಸಂಚಾರ ವ್ಯತ್ಯಯವಾಗಿತ್ತು.

ವಿಸ್ಮಯ ನ್ಯೂಸ್, ಯಲ್ಲಾಪುರ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Back to top button