ಕಾರವಾರ: ಆತ ಪುಣಾದಲ್ಲಿ ಉದ್ಯಮ ಹೊಂದಿದ್ದ ಶ್ರೀಮಂತ. ಇಲ್ಲಿನ ಸಾತೇರಿ ದೇವಿಯ ಜಾತ್ರೆಗಾಗಿ ಊರಿಗೆ ಬಂದಿದ್ದ. ಈ ವೇಳೆ ಬೆಳ್ಳಂಬೆಳಿಗ್ಗೆ ಮನೆಗೆ ನುಗ್ಗಿದ ಐವರು ದುಷ್ಕರ್ಮಿಗಳು, ಈತನನ್ನು ಕೊಲೆ ಮಾಡಿದ್ದಾರೆ. ತಾಲೂಕಿನ ಹಣಕೋಣ ಗ್ರಾಮದಲ್ಲಿ ನಡೆದ ಘಟನೆ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ.
ಇದನ್ನೂ ಓದಿ: ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ: ಪದವಿ ಆದವರು ಅರ್ಜಿ ಸಲ್ಲಿಸಿ
ವಿನಾಯಕ ನಾಯ್ಕ (52) ಹತ್ಯೆಗೊಳಗಾದ ವ್ಯಕ್ತಿ. ವಿನಾಯಕ ನಾಯ್ಕ ಅವರ ಪತ್ನಿ ವೈಶಾಲಿ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ವೈಶಾಲಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆ ಬಳಿಕ ಸ್ಥಳದಲ್ಲೇ ಮಾರಕಾಸ್ತ್ರಗಳನ್ನು ಎಸೆದು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಅಪರಿಚಿತರು ಬೆಳಿಗ್ಗೆ ಬಂದು ಬೆಲ್ ಮಾಡಿದ್ದಾರೆ. ಬಾಗಿಲು ತೆರೆದ ವೇಳೆ ಈ ಕೃತ್ಯ ಎಸಗಿದ್ದಾರೆ. ಜಾತ್ರೆಗೆ ತೆರಳಿ ವಿನಾಯಕ ನಾಯ್ಕ ಅವರು ಇಂದೇ ಮರಳಿ ಪುಣಾಗೆ ಹೋಗುವ ಸಿದ್ಧತೆಯಲ್ಲಿದ್ದರು. ಕಾರವಾರದ ಚಿತ್ತಾಕುಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಪರಿಶೀಲನೆ ನಡೆಸಿದ್ದಾರೆ. ಯಾವ ವಿಚಾರಕ್ಕೆ ಕೊಲೆಯಾಗಿದೆ ಎಂಬುದು ತನಿಖೆಯಿಂದ ಹೊರಬರಬೇಕಿದೆ.
ವಿಸ್ಮಯ ನ್ಯೂಸ್, ಕಾರವಾರ