ಅಂಕೋಲಾ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಕನ್ನಡ ರಥಯಾತ್ರೆಗೆ ಅಂಕೋಲಾ ತಾಲೂಕಿನಲ್ಲಿಯೂ ಭವ್ಯ ಸ್ವಾಗತ ಕೋರಲಾಯಿತು. ಅಂಕೋಲಾ ತಾಲೂಕು ದಂಡಾಧಿಕಾರಿ ಅನಂತ ಶಂಕರ ಅವರು ಕನ್ನಡ ಭುವನೇಶ್ವರಿಗೆ ಪುಷ್ಪ ಸಮರ್ಪಿಸಿ ಆರತಿ ಬೆಳಗಿ ಕನ್ನಡ ರಥವನ್ನು ಸ್ವಾಗತಿಸಿದರು.
ಶಿರೂರು ದುರಂತ: ಮಳೆಯಿಂದ ಹೆಚ್ಚಾದ ನೀರಿನ ವೇಗ: ಕಾರ್ಯಾಚರಣೆಗೆ ಮತ್ತೆ ಸವಾಲು?
ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ ಡಿಸೆಂಬರ್ 20 ರಿಂದ ಮೂರು ದಿನಗಳ ಕಾಲ ಮಂಡ್ಯದಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಅದರ ಭಾಗವಾಗಿ ರಾಜ್ಯಾದ್ಯಂತ ಕನ್ನಡ ರಥಯಾತ್ರೆಯನ್ನು ನಡೆಸಲಾಗುತ್ತಿದೆ, ಜಿಲ್ಲೆಯ ಸಿದ್ಧಾಪುರದ ಭುವನೇಶ್ವರಿ ದೇಗುಲದಲ್ಲಿ ರಥಯಾತ್ರೆಗೆ ಚಾಲನೆ ದೊರಕಿದ್ದು ಜಿಲ್ಲೆಯ ಜನರು ಸಂಭ್ರಮದಿAದ ರಥಯಾತ್ರೆಗೆ ಸ್ವಾಗತ ಕೋರುತ್ತಿದ್ದಾರೆ ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿ ಸುನಿಲ್. ಎಂ, ಉಪ ತಹಶೀಲ್ಧಾರ ಗಿರೀಶ್ ಜಾಂಬಾವಳಿಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್, ತಾಲೂಕು ಆರೋಗ್ಯಾಧಿಕಾರಿ ಡಾ ಜಗದೀಶ ನಾಯ್ಕ, ಡಾ.ಅರ್ಚನಾ ನಾಯಕ, ಪಿ.ಎಸ್. ಐ ಉದ್ದಪ್ಪ ಧರೆಪ್ಪನವರ್, ತಾಲೂಕು ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಕಾರ್ಯದರ್ಶಿ ಜಗದೀಶ ನಾಯಕ ಹೊಸ್ಕೇರಿ, ರಫಿಕ್ ಶೇಖ,ಜಿ.ಆರ್. ತಾಂಡೇಲ್ ಮೋಹನ ಹಬ್ಬು, ರಾಮಕೃಷ್ಣ ಗುಂದಿ, ಮಹೇಶ ನಾಯಕ, ರವೀಂದ್ರ ಕೇಣಿ, ಹೊನ್ನಮ ನಾಯಕ, ವಿನಾಯಕ ಹೆಗಡೆ, ಪುಷ್ಪಾ ನಾಯ್ಕ, ಎಸ್. ವಿ.ವಸ್ತ್ರದ, ಮಹಾಂತೇಶ ರೇವಡಿ ಮೊದಲಾದವರು ಇದ್ದರು. ಕುಂಬಮೇಳ ಸ್ಥಾಗತ ಮೆರವಣಿಗೆ ಗಮನ ಸೆಳೆಯಿತು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ