ಸಿದ್ದಾಪುರ: ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೆ 10 ವರ್ಷ ಕಾರಾಗ್ರಹ ಶಿಕ್ಷೆ 30 ಸಾವಿರ ದಂಡ ಮತ್ತು ಸಂತ್ರಸ್ತೆಗೆ 50 ಸಾವಿರ ಪರಿಹಾರದ ತೀರ್ಪು ನೀಡಿ ಶಿರಸಿ 1 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅದೇಶಿಸಿದೆ. ಸಿದ್ದಾಪುರ ತಾಲೂಕಿನ ಹಲಗೇರಿಯ ಆರೋಪಿತ ವೀರಭದ್ರ ತಿಮ್ಮ ನಾಯ್ಕ ನು ತನ್ನ ಹತ್ತಿರದ ಮನೆಯ ಮಾನಸಿಕ ಅಸ್ವಸ್ಥ ಯುವತಿಯ ಸಲುಗೆ ಬೆಳೆಸಿ ಮನೆಯಲ್ಲಿ ಯಾರು ಇಲ್ಲದ ವೇಳೆ ಪುಸಲಾಯಿಸಿ ಅರಣ್ಯ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ್ದ.
ನೇಮಕಾತಿ: ನಬಾರ್ಡ್ ನಲ್ಲಿ 108 ಉದ್ಯೋಗಾವಕಾಶ: SSLC ಆದವರು ಅರ್ಜಿ ಸಲ್ಲಿಸಬಹುದು
ಈ ಬಗ್ಗೆ 2020 ರಲ್ಲಿ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನಂತರ ನ್ಯಾಯಧೀಶ ಕಿರಣ ಕಿಣಿ ಅವರು ಆರೋಪಿತನ ವಿರುದ್ಧ ಆರೋಪ ಸಾಬೀತ್ತಾದ್ದರಿಂದ ತೀರ್ಪು ನೀಡಿ ಆದೇಶಿಸಿದ್ದಾರೆ.
ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ