ಗೋಮಾಳ ಜಾಗದಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಗೆ ಜಮೀನು ಮಂಜೂರು: ಗ್ರಾಮ ಪಂಚಾಯತ ಮುಂದೆ ಧರಣಿ ನಡೆಸಿ ಆಕ್ರೋಶ
ಸಿದ್ದಾಪುರ: ಮಳಲವಳ್ಳಿಯಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಗೆ ಜಮೀನುಗಳ ಮಂಜೂರು ಮಾಡಿದ ಠರಾವನ್ನ ರದ್ದುಪಡಿಸುವಂತೆ ಆಗ್ರಹಿಸಿ ಸ್ಥಳೀಯ ಗ್ರಾಮಸ್ಥರು ಸಿದ್ದಾಪುರ ತಾಲೂಕಿನ ಮನ್ಮನೆ ಗ್ರಾಮ ಪಂಚಾಯತ ಕಾರ್ಯಾಲಯದ ಎದುರು ಧರಣಿ ನಡೆಸಿದರು. ಮನ್ಮನೆ ಗ್ರಾಮದ ಗ್ರಾಮ ಸುಧಾರಣಾ ಕಮಿಟಿ ಅಧ್ಯಕ್ಷ ವೆಂಕಟೇಶ ಹನುಮಾ ನಾಯ್ಕ ಮಳಲವಳ್ಳಿ ಮಾತನಾಡಿ ಖಾಸಗಿ ಕಂಪನಿಗಳು ನಮ್ಮೂರಿಗೆ ಬಂದು ನಮ್ಮೂರಿನ ಗೋಮಾಳ ಜಾಗದಲ್ಲಿ ಖಾಸಗಿ ಕಂಪನಿಗಳು ಆ ಜಾಗ ತಮಗೆ ಬೇಕು ಎಂದು ಪಂಚಾಯಿತಿಯ ಠರಾವು ಮಾಡಿಸಿ ಕೆಲಸವನ್ನು ಪ್ರಾರಂಭಿಸಿದ್ದಾರೆ.
ವಸ್ತ್ರಕಲಾ ಡಿಸೈನ್ಸ್ ಮತ್ತು Embroidery works
ಅದು ಫಲವತ್ತಾದ ಜಾಗ. ಅಲ್ಲಿ ಕೈಗಾರಿಕಾ ಕಟ್ಟಡಗಳನ್ನು ಕಟ್ಟುವುದು ಸೂಕ್ತವಲ್ಲ . ಜಾನುವಾರುಗಳ ಮೇವಿಗಾಗಿ ಆ ಜಾಗವನ್ನು ನಾವು ರಕ್ಷಿಸಿಕೊಂಡು ಬಂದಿದ್ದೇವೆ. ಇಲ್ಲಿ ಬಿಸಿಲಿನಲ್ಲಿ ಪ್ರತಿಭಟನೆ ಗೆ ಬಂದು ಕುಳಿತಿರುವ ಹೆಣ್ಣು ಮಕ್ಕಳನ್ನು ನೋಡಿದರೆ ಎಷ್ಟು ವಿರೋಧವಿದೆ ಎಂದು ತಮಗೆ ಅರ್ಥವಾಗುತ್ತದೆ. ಇದು ಸಣ್ಣ ವಿಚಾರ . ಮನಸ್ಸು ಮಾಡಿದರೆ ಇದನ್ನು ತಡೆಯಬಹುದು. ಇದನ್ನು ಪುನರ್ ಪರಿಶೀಲಿಸುವ ಹಕ್ಕು ಮಾನ್ಯ ಜಿಲ್ಲಾಧಿಕಾರಿಗಳಿಗೆ ಇದೆ.
ನಮ್ಮ ಶಾಸಕರಾದ ಭೀಮಣ್ಣ ನಾಯ್ಕ್ ರವರಲ್ಲಿ ಸಮಸ್ಯೆ ಬಗೆಹರಿಸುವ ಕುರಿತು ಡಿಸಿ ರವರನ್ನು ಸ್ಥಳಕ್ಕೆ ಕರೆಯಿಸಿ ಎಂದು ಈ ಹಿಂದೆ ಹೇಳಿದ್ದೆವು ಆದರೆ ಭೀಮಣ್ಣ ನಾಯ್ಕ ಹಾರಿಕೆ ಉತ್ತರ ನೀಡಿ ನುಣುಚಿ ಕೊಂಡಿದ್ದಾರೆ. ಸರಕಾರ ಈ ಆದೇಶ ಕೈ ಬಿಡದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ತಾಲೂಕಾ ದಂಡಾಧಿಕಾರಿ ಸಿದ್ದಾಪುರ ಕಛೇರಿಯ ಆವರಣದಲ್ಲಿ ಗ್ರಾಮದ ಜನ – ದನಕರು ಜಾನುವಾರು ಗಳೊಂದಿಗೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಸಿದರು.
ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ