ಮನೆ ಸಮೀಪ ಕಾಣಿಸಿಕೊಂಡ ಬೃಹತ್ ಕಾಳಿಂಗ ಸರ್ಪ: ಯಶಸ್ವಿ ಕಾರ್ಯಾಚರಣೆ

ಯಲ್ಲಾಪುರ: ತಾಲೂಕಿನ ಅರಬೈಲ್ ಸಮೀಪದ ತೋಟದಲ್ಲಿ 10 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಉರಗ ಸ್ನೇಹಿ ಸ್ನೇಕ್ ಸೂರಜ್ , ಇದನ್ನು ಸೆರೆಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಈ ಕಾಳಿಂಗ ಸರ್ಪ ಕಾಣಿಸಿಕೊಂಡಾಗ, ಅವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಶಿರೂರು ದುರಂತ: 3ನೇ ಹಂತದ ಕಾರ್ಯಾಚರಣೆಗೂ ಬ್ರೇಕ್? ಡಿಎನ್ಎ ಪರೀಕ್ಷಾ ವರದಿ ಮೇಲೆ ನಿರೀಕ್ಷೆ

ಅರಣ್ಯ ಇಲಾಖೆಯು ಸ್ನೇಕ್ ಸೂರಜ್ ಅವರ ಸಹಾಯ ಪಡೆದು ಕಾಳಿಂಗ ಸರ್ಪವನ್ನು ರಕ್ಷಿಸಲು ಕ್ರಮ ಕೈಗೊಂಡಿತು. ಸ್ಥಳಕ್ಕಾಗಮಿಸಿದ ಸ್ನೇಕ್ ಸೂರಜ್ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಸ್ಥಳಿಯರ ಆತಂಕವನ್ನು ದೂರ ಮಾಡಿದ್ದಾರೆ. ವಿಶೇಷವೆಂದರೆ, ಇದು ಸ್ನೇಕ್ ಸೂರಜ್ ಅವರ 15ನೇ ಕಾಳಿಂಗ ಸರ್ಪ ರಕ್ಷಣಾ ಕಾರ್ಯಾಚರಣೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಹರೀಶ ಮಡಿವಾಳ, ಚಂದ್ರಕಾAತ ನಾಯ್ಕ, ಗೋಪಾಲ ಗೌಡ, ಮತ್ತು ಸೋಮಶೇಖರ್ ನಾಯ್ಕ ಸ್ನೇಕ್ ಸೂರಜ್ ಅವರಿಗೆ ಸಹಕರಿಸಿದರು.

ವಿಸ್ಮಯ ನ್ಯೂಸ್, ಯಲ್ಲಾಪುರ

Exit mobile version