ಕಾರವಾರ: ಅಕ್ರಮವಾಗಿ ಯೂರಿಯಾ ಗೊಬ್ಬರ ಸಾಗಿಸುತ್ತಿದ್ದ ಲಾರಿಯನ್ನು ಶಿರಸಿಯಲ್ಲಿ ಪೋಲೀಸರು ತಡೆದು ಕೃಷಿ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ಸಿಗ್ಗಾವಿ ತಾಲೂಕಿನ ಬಂಕಾಪುರ ಸಮೀಪದ ಚಂದಾಪುರ ಗ್ರಾಮದಿಂದ ಬೇರೆ ಜಿಲ್ಲೆಗೆ ಅಕ್ರಮವಾಗಿ ಯೂರಿಯಾ ಗೊಬ್ಬರ ಸಾಗಿಸುತ್ತಿದ್ದ ಲಾರಿಯನ್ನು ಹಿಡಿದು ಹೆಚ್ಚಿನ ಪರಿಶೀಲನೆಗಾಗಿ ಕೃಷಿ ಇಲಾಖೆಗೆ ಒಪ್ಪಿಸಲಾಗಿದೆ.
ಕೆಲಸಕ್ಕೆ ಹೋದ ಯುವತಿ ನಾಪತ್ತೆ: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ
ಸುಮಾರು 400ಕ್ಕೂ ಹೆಚ್ಚಿನ ಯೂರಿಯಾ ರಸಗೊಬ್ಬರ ಇರುವ ಪ್ಯಾಕೇಟ್ ಗಳನ್ನು ಲಾರಿ ಮೂಲಕ ಮಂಗಳೂರಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಈ ಸಂಬoಧ ಸಹಾಯಕ ಕೃಷಿ ನಿರ್ದೇಶಕರು ಹೆಚ್ಚಿನ ತನಿಖೆ ನಡೆಸಿದ್ದಾರೆ. ಜಿಲ್ಲೆಯಿಂದ ಜಿಲ್ಲೆಗೆ ಗೊಬ್ಬರ ಸಾಗಿಸುವಾಗ ರಾಜ್ಯ ಮಟ್ಟದ ಲೈಸೆನ್ಸ್ ಬೇಕೆನ್ನುವ ನಿಯಮವಿದೆ. ಇದನ್ನು ಮೀರಿ ರೈತರಿಗೆ ನೀಡಬೇಕಾಗಿದ್ದ ಗೊಬ್ಬರ ಬೇರೆ ಜಿಲ್ಲೆಗೆ ಸಾಗಟ ಮಾಡುತ್ತಿದ್ದರೆಂದು ತಿಳಿದುಬಂದಿದೆ.
ವಿಸ್ಮಯ ನ್ಯೂಸ್, ಕಾರವಾರ