Important
Trending

ಬಾವಿಯಲ್ಲಿ ಬಿದ್ದು ಮೃತಪಟ್ಟ ಗೃಹರಕ್ಷಕ ದಳದ ಸಿಬ್ಬಂದಿ ? ಸರಳ ವ್ಯಕ್ತಿತ್ವದ ಉತ್ತಮ ಕ್ರೀಡಾಪಟು ಇನ್ನಿಲ್ಲ

ಅಂಕೋಲಾ: ಬಾವಿಯಲ್ಲಿ ಬಿದ್ದು ಮೃತಪಟ್ಟ ಗೃಹರಕ್ಷಕ ದಳದ ಸಿಬ್ಬಂದಿ ? ಸರಳ ವ್ಯಕ್ತಿತ್ವದ ಉತ್ತಮ ಕ್ರೀಡಾಪಟು ಇನ್ನಿಲ್ಲ. ಅಂಕೋಲಾ : ಗೃಹರಕ್ಷಕ ದಳ (ಹೋಂ ಗಾರ್ಡ್) ಆಗಿ ಸೇವೆ ಸಲ್ಲಿಸುತ್ತಿದ್ದ ವಿವಾಹಿತ ವ್ಯಕ್ತಿ ಒರ್ವ ಬಾವಿಯಲ್ಲಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಬಾಸಗೋಡ – ಕೋಗ್ರೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ರಮೇಶ ಮೋನು ಆಗೇರ (42 ) ಎಂಬಾತನೇ ಮೃತ್ ದುರ್ದೈವಿ.

ಅಣ್ಣ ವಾಶ್ ರೂಮಿಗೆ ಹೋಗಿ ಬರುವಷ್ಟರಲ್ಲಿ ಬಸ್ ನಿಲ್ದಾಣದಿಂದ ಕಾಣೆಯಾದ ತಂಗಿ ? ಸ್ನೇಹಿತೆ ಜೊತೆ ಮಾತನಾಡುತ್ತಿದ್ದವಳು ಎಲ್ಲಿ ಹೋದಳು

ಕಳೆದ ಕೆಲವು ವರ್ಷಗಳಿಂದ ಗೃಹರಕ್ಷಕ ದಳದ ತಾಲೂಕು ಘಟಕದಡಿ ಸೇವೆ ಸಲ್ಲಿಸಿ ಪೊಲೀಸ್ ಇಲಾಖೆಗೂ ವಿಶೇಷ ಸಹಕಾರ ನೀಡುತ್ತಾ ಬಂದಿದ್ದ ರಮೇಶ ಆಗೇರ , ಕ್ರಿಕೆಟ್ ವಾಲಿಬಾಲ್ ಹಾಗೂ ಕಬ್ಬಡ್ಡಿಯಲ್ಲಿ ಉತ್ತಮ ಆಟಗಾರನಾಗಿಯೂ ಗಮನ ಸೆಳೆದಿದ್ದ. ಊರಿನ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳಲ್ಲಿ ತನನ ತೊಡಗಿಸಿಕೊಂಡಿದ್ದ ಈತ ಜೀವನೋಪಾಯಕ್ಕಾಗಿ ಪೇಂಟಿಂಗ್ ಮತ್ತಿತರ ದಿನಗೂಲಿ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಆತನಿಗೆ ಕಾಡಿದ ಅನಾರೋಗ್ಯ ಇಲ್ಲವೇ ಇನ್ನಿತರ ಕಾರಣಗಳಿಂದ ಸ್ವಲ್ಪ ಮಾನಸಿಕ ಖಿನ್ನತೆಗೂ ಒಳಗಾಗಿದ್ದ ಎನ್ನಲಾಗಿದ್ದು ,ಮನೆಯ ಹತ್ತಿರದ ಸರಕಾರಿ ಶಾಲೆಯ ಆವರಣದಲ್ಲಿದ್ದ ಬಾವಿಯಲ್ಲಿ ಬಿದ್ದು ಮೃತ ಪಟ್ಟಿದ್ದಾನೆ.

ಈ ಆಕಸ್ಮಿಕ ಅವಘಡಕ್ಕೆ ನಿಖರ ಕಾರಣಗಳು ತಿಳಿದು ಬರಬೇಕಿದೆ.ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಪಿಎಸ್ಐ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ.ಕಳೆದ ಎರಡು ಮೂರು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದ ರಮೇಶನ ಅಕಾಲಿಕ ಸಾವು ಆತನ ಕುಟುಂಬವನ್ನು ಕಂಗೆಡಿಸಿದಂತಿದ್ದು,ನೊಂದ ಬಡ ಕುಟುಂಬಕ್ಕೆ ನೆರವಿನ ಹಸ್ತ ಚಾಚುವ ಮೂಲಕ ಸಮಾಜ ಹಾಗೂ ಸಂಘ ಸಂಸ್ಥೆಗಳು ಮತ್ತು ಸಂಬಂಧಿತರರು ಸಾಂತ್ವನ ಹೇಳಬೇಕಿದೆ.

ಪೊಲೀಸ್ , ಗೃಹ ರಕ್ಷಕ ದಳ, ಕೊಗ್ರೆ ಹಾಗೂ ಸುತ್ತಮುತ್ತಲಿನ ಗ್ರಾಮದ ಕೆಲ ಪ್ರಮುಖರು ಮತ್ತು ನಾಗರಿಕರು ಸರಳ ವ್ಯಕ್ತಿತ್ವದ ಮತ್ತು ಕರ್ತವ್ಯ ನಿಷ್ಠೆ ಹೊಂದಿದ್ದ ರಮೇಶ್ ಆಗೇರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ತಾಲೂಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ನಾಯ್ಕ ಪೊಲೀಸ್ ಇಲಾಖೆ ಮತ್ತು ಸ್ಥಳೀಯರಿಗೆ ಸಹಕರಿಸಿದರು .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button