Important
Trending

ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ

ಭಟ್ಕಳ: ಮುರುಡೇಶ್ವರದ ಕಡಲಿನಲ್ಲಿ ಮುಳುಗುತ್ತಿದ್ದ ಪ್ರವಾಸಿಗನನ್ನು ಕರಾವಳಿ ಕಾವಲು ಪಡೆಯ ಪೊಲೀಸ್, ಕೆ.ಎನ್.ಡಿ ಸಿಬ್ಬಂದಿ,  ಹಾಗೂ ಲೈಫ್ ಗಾರ್ಡ್ ಜಂಟಿ ಕಾರ್ಯಾಚರಣೆ  ನಡೆಸಿ ರಕ್ಷಣೆ ಮಾಡಿದ್ದಾರೆ. ಮುರುಡೇಶ್ವರ ಪ್ರವಾಸಕ್ಕೆ ಆಗಮಿಸಿದ     ಬೆಂಗಳೂರಿನ ನಿವಾಸಿ ಪುನೀತ್ ಕೆ(19) ತನ್ನ ಸಹಚರರೊಂದಿಗೆ ಕಡಲಿನಲ್ಲಿ ಈಜಲು ತೆರಳಿದ್ದ, ಈಜು ಬಾರದ ಪುನೀತ್ ಸಮುದ್ರದ ಅಲೆಗೆ ಸಿಕ್ಕು ಕೊಚ್ಚಿಕೊಂಡು ಹೋಗುವಾಗ ಕೆ.ಎನ್.ಡಿ ಸಿಬ್ಬಂದಿ ಯೊಗೇಶ ಹರಿಕಾಂತ ಹಾಗೂ ಲಕ್ಷ್ಮಣ ಹರಿಕಾಂತ ಪಾತಿ ದೋಣಿಯ ಸಹಾಯದಿಂದ ಪುನೀತನನ್ನು ರಕ್ಷಣೆ ಮಾಡಿ ದಡಕ್ಕೆ ಕರೆತಂದಿದ್ದಾರೆ.

ಅಣ್ಣ ವಾಶ್ ರೂಮಿಗೆ ಹೋಗಿ ಬರುವಷ್ಟರಲ್ಲಿ ಬಸ್ ನಿಲ್ದಾಣದಿಂದ ಕಾಣೆಯಾದ ತಂಗಿ ? ಸ್ನೇಹಿತೆ ಜೊತೆ ಮಾತನಾಡುತ್ತಿದ್ದವಳು ಎಲ್ಲಿ ಹೋದಳು

ಕಳೆದ ವಾರ ಬೆಂಗಳೂರಿನ‌ ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟ ಹಿನ್ನೇಲೆಯಲ್ಲಿ ಕಡಲ ಪ್ರವೇಶಕ್ಕೆ ನಿರ್ಭಂದ ಹೇರಲಾಗಿತ್ತು. ಶನಿವಾರ  ದೇವಸ್ಥಾನ ಎಡಭಾಗದ ಬದಲಿಗೆ ಬಲಭಾಗದಲ್ಲಿ ಮೀನುಗಾರಿಕೆ ನಡೆಸುವ  ಕಡಲ ತೀರ ಪ್ರವೇಶಕ್ಕೆ ಪ್ರವಾಸಿಗರಿಗೆ ಅನುಮತಿ ನೀಡಲಾಗಿತ್ತು. ಅದರೆ ಪ್ರವಾಸಿಗರ ರಕ್ಷಣೆಗೆ ಅವಶ್ಯ ಇರುವ ಸ್ಪೀಡ್ ಬೋಡ್, ಜೀವರಕ್ಷಕ ಸಾಮಾಗ್ರಿ ಇಲ್ಲದಿದ್ದರಿಂದ ಪಾತಿದೋಣಿಯ ಮೂಲಕ ರಕ್ಷಣೆ ಮಾಡಲಾಗಿದೆ. 

ಒಟ್ಟಿನಲ್ಲಿ ಪ್ರವಾಸಿಗರನ್ನು ನೀರಿಗೆ ಇಳಿಯಲು ಬಿಟ್ಟರೆ ಸ್ಥಳೀಯ ಆಡಳಿತ ಸಂಕಷ್ಟ, ಇಳಿಯಲು ಅವಕಾಶ ನೀಡದಿದ್ದರೆ ಪ್ರವಾಸೋಧ್ಯಮವನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಕುಟುಂಬಗಳಿಗೆ ಕಷ್ಟ ಎಂಬ ಪರಿಸ್ಥಿತಿ ತಲೆದೋರಿದ್ದು, ಈ ಸಂದರ್ಭದಲ್ಲಿ ಹಿಂಗಾರು ಮಳೆ ಕೂಡ ಹಿಂದೆಂದಿಗಿಂತಲೂ ಹೆಚ್ಚು ಚುರುಕಾಗಿದೆ ಎಂಬುದಂತೂ ಗಮನಾರ್ಹ ವಿಷಯವಾಗಿದೆ. ಆದರೆ ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಹೆಚ್ಚು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡು ಪ್ರವಾಸೋದ್ಯಮಕ್ಕೆ ಹೊಡೆತ ಬೀಳದಂತೆ ನೋಡಿಕೊಳ್ಳಬೇಕಾದುದು ಮುಖ್ಯವೆನಿಸುತ್ತದೆ.

ವಿಸ್ಮಯ ನ್ಯೂಸ್ ಈಶ್ವರ ನಾಯ್ಕ, ಭಟ್ಕಳ

Back to top button