ಶಿರಸಿ: ಯುವತಿಯೊಬ್ಬಳು ನಾಪತ್ತೆಯಾದ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ರಾಮನಬೈಲ್‌ನ ಅಕ್ಷತಾ ರಾಮಚಂದ್ರ ಆಚಾರಿ ನಾಪತ್ತೆಯಾದ ಯುವತಿಯಾಗಿದ್ದಾಳೆ. ಈಕೆ ಅಕ್ಟೋಬರ್ 11ರಂದು ಯಾರಿಗೂ ಹೇಳದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಎಲ್ಲಿಯೋ ಹೋಗಿ ನಾಪತ್ತೆಯಾಗಿದ್ದಾಳೆ ಎಂದು ಸಹೋದರ ಅನಿಲ್ ಆಚಾರಿ ನಗರ ಠಾಣೆಯಲ್ಲಿ ದೂರು ನಿಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಿಸ್ಮಯ ನ್ಯೂಸ್, ಶಿರಸಿ