Important
Trending

ಮೆಸೇಜ್ ಕಳುಹಿಸಿ ಮನೆ ಬಿಟ್ಟು ಹೋದ ಯುವಕ: ಆ ಸಂದೇಶದಲ್ಲಿ ಏನಿದೆ ನೋಡಿ?

ಕಾರವಾರ: ಬಿಸಿಎಂ ಹಾಸ್ಟೇಲಿನಲ್ಲಿ ಉಳಿದುಕೊಂಡು ಕಾಲೇಜಿಗೆ ಹೋಗುತ್ತಿದ್ದ ಯಲ್ಲಾಪುರದ ಹುಣಶೆಟ್ಟಿಕೊಪ್ಪದ ಮಂಜುನಾಥ ಕರಾತ್ ಎನ್ನುವವರು ಕಾಣೆಯಾಗಿದ್ದಾರೆ. ಈತ ಕಾರವಾರದ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಓದುತ್ತಿದ್ದು, ದಸರಾ ರಜೆ ಹಿನ್ನೆಲೆ ಊರಿಗೆ ಬಂದಿದ್ದ ಎನ್ನಲಾಗಿದೆ. ರಜೆ ಅವಧಿ ಮುಗಿಯುವ ಮುನ್ನವೆ ಕಾರವಾರಕ್ಕೆ ತೆರಳಿದ್ದನು. ಖುರ್ಷವಾಡದಲ್ಲಿರುವ ಸರ್ಕಾರಿ ಬಿಸಿಎಂ ಹಾಸ್ಟೇಲಿನಲ್ಲಿ ಉಳಿದುಕೊಂಡಿದ್ದ ಈತ ಅಲ್ಲಿಂದಲೇ ತನ್ನ ಸಹೋದರಿ ಸಾವಿತ್ರಿಗೆ ಫೋನ್ ಮಾಡಿದ್ದನು.

ಇದನ್ನೂ ಓದಿ: ತನ್ನ ಮೊಬೈಲ್ ಸ್ವಿಚ್ ಆಫ್ ಇದೆ ಎಂದು ಹೇಳಿ ಬೇರೆಯವರ ಮೊಬೈಲಿಂದ ಕರೆ ಮಾಡಿದ ಯುವಕ ನಾಪತ್ತೆ

ಫೋನ್ ಕಡಿತವಾದ ನಂತರ ‘ತನ್ನದೊಂದು ಗುರಿ ಇದೆ. ಅದು ಮುಟ್ಟುವತನಕ ಮನೆಗೆ ಬರುವುದಿಲ್ಲ’ ಎಂದು ಮಂಜುನಾಥ ವಾಟ್ಸಪ್ ಮೂಲಕ ವೈಸ್ ಮೆಸೇಜ್ ಕಳುಹಿಸಿದ್ದಾನೆ. ಈ ವಿಷಯವನ್ನು ಅಪ್ಪನಿಗೆ ಹೇಳು. ತನ್ನನ್ನು ಹುಡುಕುವ ಪ್ರಯತ್ನ ಮಾಡುವುದು ಬೇಡ. ತನ್ನ ಕೆಲಸ ಮುಗಿದ ಮೇಲೆ ನಾನೇ ಮನೆಗೆ ಮರಳುತ್ತೇನೆ ಎಂದು ಸಹ ವೈಸ್ ಮೆಸೇಜಿನಲ್ಲಿ ಮಂಜು ನಾಥ್ ಹೇಳಿದ್ದಾನೆ. ಇದರಿಂದ ಆತಂಕಗೊoಡ ಮಂಜುನಾಥನ ತಂದೆ ಶ್ಯಾಮ ಕರಾತ್ ಕಾರವಾರಕ್ಕೆ ತೆರಳಿ ಹುಡುಕಾಟ ನಡೆಸಿದರು.

ಸಂಬoಧಿಕರಲ್ಲಿ ವಿಚಾರಿಸಿದರು. ಎಲ್ಲಿ ಹುಡುಕಿದರೂ ಮಂಜುನಾಥನ ಸುಳಿವು ಸಿಕ್ಕಿಲ್ಲ. ಯಾರಾದರೂ ಪುಸಲಾಯಿಸಿ ಕರೆದೊಯ್ದ ಅನುಮಾನದ ಹಿನ್ನೆಲೆ ಅವರು ‘ತನ್ನ ಮಗನನ್ನು ಹುಡುಕಿಕೊಡಿ’ ಎಂದು ಪೊಲೀಸ್ ದೂರು ನೀಡಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button