ಶಿರಸಿ: ರಸ್ತೆಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಶಿರಸಿ ಕುಮಟಾ ಹೆದ್ದಾರಿಯ ಹಾರುಗಾರ ಬಳಿ ನಡೆದಿದೆ. ಆಡಳ್ಳಿಯ ಮನೋಜ ಗಜಾನನ ಹೆಗಡೆ ಮೃತಪಟ್ಟ ದುರ್ದೈವಿ ಬೈಕ್ ಸವಾರನಾಗಿದ್ದಾನೆ. ಈತನು ಶಿರಸಿ ಎಂ. ಇ. ಎಸ್. ಆರ್. ಎನ್. ಶೆಟ್ಟಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ ಮೊದಲ ವರ್ಷದ ಇಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಯಾಗಿದ್ದಾನೆ.
ಕುಡಿದ ಮತ್ತಿನಲ್ಲಿ ಜಗಳ: ಕಲ್ಲು ಎತ್ತು ಹಾಕಿ ಓರ್ವನ ಕೊಲೆ
ಮುಂಜಾನೆ ಮನೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿ ತನದಿಂದ ಬೈಕ್ ಚಾಲನೆ ಮಾಡಿಕೊಂಡು ಬಂದು ಹಾರುಗಾರ ಬಳಿ ಕೆಟ್ಟುನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್, ಶಿರಸಿ