Follow Us On

WhatsApp Group
Important
Trending

ಕೆಲ ಆಟೋರಿಕ್ಷಾ ಹಾಗೂ ಇಲೆಕ್ಟ್ರಿಕಲ್ ವಾಹನದವರಿಂದ ಬಾಡಿಗೆ ಆರೋಪ: ಕಾನೂನು ಕ್ರಮ ಕೈಗೊಳ್ಳುವಂತೆ ಕಾರು ಚಾಲಕ ಹಾಗೂ ಮಾಲಕರ ಯುನಿಯನ್ ಆಗ್ರಹ

ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಕೆಲ ಆಟೋ ರಿಕ್ಷಾ ಹಾಗೂ ಇಲೆಕ್ಟ್ರಿಕಲ್ ವಾಹನದವರು ದೂರದೂರಿಗೆ ಬಾಡಿಗೆ ಹೊಡೆಯುತ್ತಿದ್ದು , ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿ , ಕಾರು ಚಾಲಕ ಹಾಗೂ ಮಾಲಕರ ಯುನಿಯನ್ ಅವರು ಜಿಲ್ಲಾಧಿಕಾರಿಗಳು , ಜಿಲ್ಲಾ ಪೊಲೀಸ್ ವರಿಷ್ಠರು , ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.

ಅಂಕೋಲಾ: ತಾಲೂಕಿನಲ್ಲಿ ಕೆಲವರು ಇಲೆಕ್ಟ್ರಿಕ್ ವಾಹನ ಮತ್ತು ಆಟೋ ರಿಕ್ಷಾಗಳನ್ನು ನಿಯಮ ಬಾಹಿರವಾಗಿ ದೂರದ ಊರುಗಳಿಗೆ ಬಾಡಿಗೆಗೆ ಓಡಿಸುತ್ತಿದ್ದು ಅಂಥವರ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ತಾಲೂಕಿನ ಸಿದ್ಧಿವಿನಾಯಕ ಟ್ಯಾಕ್ಸಿ ಚಾಲಕ ಮತ್ತು ಮಾಲಕರ ಸಂಘದ ವತಿಯಿಂದ ಅಂಕೋಲಾ ಪೊಲೀಸ್ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.

ಇಲೆಕ್ಟ್ರಿಕ್ ವಾಹನ ಮತ್ತು ಆಟೋ ರಿಕ್ಷಾಗಳಲ್ಲಿ ವ್ಯಾಪ್ತಿ ಮೀರಿ ದೂರದ ಊರುಗಳಿಗೆ ಬಾಡಿಗೆಗೆ ಹೋಗುತ್ತಿರುವುದರಿಂದ
ಕಾನೂನು ಬದ್ಧವಾಗಿ ವ್ಯವಹಾರ ನಡೆಸುತ್ತಿರುವ ಟ್ಯಾಕ್ಸಿ ಮಾಲಿಕರು ಮತ್ತು ಚಾಲಕರು ಸಂಕಷ್ಟ ಎದುರಿಸುವಂತಾಗಿದೆ ಹಣಕಾಸು ಸಂಸ್ಥೆ, ಬ್ಯಾಂಕುಗಳಲ್ಲಿ ಸಾಲ ಮಾಡಿ ವಾಹನಗಳನ್ನು ಖರೀದಿಸಿ ಬಾಡಿಗೆ ಇಲ್ಲದೇ ಸಾಲದ ಕಂತು ಕಟ್ಟಲಾಗದ ಪರಿಸ್ಥಿತಿ ಎದುರಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇಲೆಕ್ಟ್ರಿಕ್ ವಾಹನ ಮತ್ತು ಆಟೋ ರಿಕ್ಷಾ ಹೊಂದಿರುವ ಕೆಲವರು ದೂರದ ತಾಲೂಕುಗಳಿಗೆ ಕಡಿಮೆ ದರದಲ್ಲಿ ಬಾಡಿಗೆಗೆ ಹೋಗುತ್ತಿದ್ದು
ಇದರಿಂದ ಅಧಿಕೃತವಾಗಿ ನೋಂದಾಯಿತ ವಾಹನಗಳು ಬಾಡಿಗೆಯಿಂದ ವಂಚಿತರಾಗುವಂತಾಗಿದೆ ನಿಯಮ ಬಾಹಿರವಾಗಿ ಬಾಡಿಗೆಗೆ ಹೋಗುತ್ತಿರುವ ವಾಹನಗಳು ಅಕಸ್ಮಾತ್ ಅಪಘಾತಕ್ಕೀಡಾದರೆ ಪ್ರಯಾಣಿಕರಿಗೆ ಯಾವುದೇ ರೀತಿಯ ವಿಮಾ ಪರಿಹಾರ ಸಿಗುವುದಿಲ್ಲ ಇದರಿಂದಾಗಿ ಪ್ರಯಾಣಿಕರನ್ನೂ ತೊಂದರೆಗೆ ಸಿಲುಕಿಸಿದಂತಾಗುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದ್ದು ನಿಯಮಗಳನ್ನು ಮೀರಿ ದೂರದ ಊರುಗಳಿಗೆ ಬಾಡಿಗೆಗೆ ಹೋಗುತ್ತಿರುವ ಇಲೆಕ್ಟ್ರಿಕ್ ಮತ್ತು ಆಟೋ ವಾಹನಗಳ ಮೇಲೆ ಕಾನೂನು ಕ್ರಮಗಳನ್ನು ಕೈಗೊಂಡು ದೂರದ ಊರುಗಳಿಗೆ ಬಾಡಿಗೆಗೆ ಹೋಗುವುದನ್ನು ನಿಯಂತ್ರಿಸಬೇಕು ಅಂಥವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಉತ್ತರ ಕನ್ನಡ ನೋಟರಿಗಳ ಸಂಘದ ಜಿಲ್ಲಾಧ್ಯಕ್ಷ ಹಾಗೂ ಟ್ಯಾಕ್ಸಿ ಯೂನಿಯನ್ ನ ಕಾನೂನು ಸಲಹೆಗಾರರಾದ ನಾಗಾನಂದ ಬಂಟ ಮಾತನಾಡಿ , ಈಗಾಗಲೇ ಈ ಕುರಿತು ಜಿಲ್ಲೆಯ ಸಂಬಂಧಿತ ಹಿರಿಯ ಅಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದ್ದು , ಅವರು ಪೂರಕವಾಗಿ ಸ್ವಂದಿಸುವ ವಿಶ್ವಾಸ ಇದೆ ಎಂದರು.

ಸಿದ್ಧಿವಿನಾಯಕ ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ರಮಾಕಾಂತ ನಾಯ್ಕ, ಉಪಾಧ್ಯಕ್ಷ ಅಕ್ಷಯ ಅಂಕೋಲೆಕರ್, ಕಾರ್ಯದರ್ಶಿ ಸತೀಶ ಕಾಮತ್, ಪ್ರವೀಣ , ಅಶೋಕ , ಮತ್ತಿತರರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button