Join Our

WhatsApp Group
Important
Trending

ಹಿಂಬದಿಯಿಂದ ಬೈಕ್ ಡಿಕ್ಕಿ: ಬೈಕ್ ಸವಾರ ಸಾವು

ಸಿದ್ದಾಪುರ : ಬೈಕುಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ ಬೈಕ್ ಸವಾರ ಮೃತಪಟ್ಟ ಘಟನೆ ಸಿದ್ದಾಪುರ ಸಿರ್ಸಿ ಮುಖ್ಯ ರಸ್ತೆಯ ವಿದ್ಯಾಗಿರಿ ಕ್ರಾಸ್ ಬಳಿ ನಡೆದಿದೆ. ಗಾಯಳುವನ್ನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯೆ ಮೃತ ಪಟ್ಟಿರುವುದಾಗಿ ದೂರು ದಾಖಲಾಗಿದೆ. ಕೆಟಿಎಂ ಬೈಕ್ ಸವಾರ ಕುರುವಂತೆಯ ಸಂದೀಪ್ ತನ್ನ ಬೈಕನ್ನು ಅತಿ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ವಿದ್ಯಾ ಗಿರಿ ಬಳಿ ಇಂಡಿಕೇಟರ್ ಹಾಕಿಕೊಂಡು ಬಲಕ್ಕೆ ತಿರುಗುತ್ತಿದ್ದ ಬೈಕ್ ಗೆ ಹಿಂದಿನಿoದ ಬಂದು ಡಿಕ್ಕಿ ಹೊಡೆಸಿದ್ದಾನೆ .

ಪರಿಣಾಮ ಬೈಕ್ ಸವಾರ ರಾಧಾಕೃಷ್ಣ (72) ಎನ್ನುವವರಿಗೆ ಗಂಭೀರ ಗಾಯವಾಗಿದೆ. ಗಂಡನ ಸಾವಿಗೆ ಕಾರಣನಾದ ಬೈಕ್ ಸವಾರ ಸಂದೀಪ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಲಕ್ಷ್ಮಿ ರಾಧಾಕೃಷ್ಣ ವಿದ್ಯಾಗಿರಿ ದೂರು ನೀಡಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Back to top button