ಸಿದ್ದಾಪುರ: ತಾಲೂಕಿನಲ್ಲಿ ಗುಡುಗು ಸಿಡಿಲಿನೊಂದಿಗೆ ಸುರಿದ ಭಾರಿ ಮಳೆ ಸುರಿದಿದೆ. ಈ ವೇಳೆ ಬೇಡ್ಕಣಿ ಗ್ರಾಮದ ಮನೆಯೊಂದಕ್ಕೆ ಸಿಡಿಲು ಬಡಿದಿದ್ದು, ಮನೆಯಲ್ಲಿದ್ದ ಟಿವಿ ಹಾಗೂ ವೈರಿಂಗ್ ಸುಟ್ಟು ಹಾನಿಯಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮನೆಲಿದ್ದ ಹಲವು ದಿನ ಬಳಕೆ ವಸ್ತುಗಳು ಸುಟ್ಟು ಹೋಗಿದೆ. ಗೋಡೆ ಬಿರುಕು ಬಿಟ್ಟು ಹಾನಿಯಾಗಿದೆ. ಮೀಟರ್ ಬೋರ್ಡ್, ಸ್ವಿಚ್ ಗಳು ಕರಕಲಾಗಿದ್ದು, ಇಬ್ಬರಿಗೆ ಸಿಡಿಲಿನ ಶಾಕ್ ತಗುಲಿದೆ. ಆದರೆ ಎಲ್ಲರೂ ಪ್ರಣಾಪಾಯದಿಂದ ಪಾರಾಗಿದ್ದಾರೆ.
ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ