ಕೋಸ್ಟ್ ಗಾರ್ಡ್ ನಿಂದ ಯಶಸ್ವಿ ಕಾರ್ಯಾಚರಣೆ
ಆಳಸಮುದ್ರದಲ್ಲಿ ಸಿಲುಕಿದ ಮೀನುಗಾರರ ರಕ್ಷಣೆ
ಭಟ್ಕಳ : ನೇತ್ರಾಣಿ ಸಮೀಪದ ಅರಬ್ಬಿ ಸಮುದ್ರದಲ್ಲಿ ಯಾಂತ್ರಿಕ ದೋಣಿಯಲ್ಲಿ ಸಿಲುಕಿದ ಮೀನುಗಾರರನ್ನ 44 ಗಂಟೆಯೊಳಗೆ ರಕ್ಷಿಸಲಾಗಿದೆ. ಭಟ್ಕಳದ ಖಮ್ರುಲ್ಲಾ ಬಾಹರ್ ಹೆಸರಿನ ಯಾಂತ್ರಿಕ ದೋಣಿ ಹೊನ್ನಾವರ ಬಂದರು ಮೂಲಕ ಮೀನುಗಾರಿಕೆಗೆ ತೆರಳಿತ್ತು. ಗುರುವಾರ ಮಧ್ಯಾಹ್ನ 2 ಗಂಟೆಗೆ ದೋಣಿಯ ಮಶೀನ್ ಹಾಳಾಗಿದ್ದರಿಂದ ಸಮಸ್ಯೆಗೆ ಈಡಾಯಿತು.
ಬೋಟಿನಲ್ಲಿ ಒಟ್ಟು 24 ಮೀನುಗಾರರಿದ್ದರು. ಅಪಾಯಕ್ಕೆ ಸಿಲುಕಿದ ಮೀನುಗಾರರು ರಕ್ಷಣೆಗಾಗಿ ಸಂಬAಧಪಟ್ಟ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಪೊಲೀಸರ ಸಹಾಯ ಯಾಚಿಸಿದ್ದರು. ನಿನ್ನೆ ಸಂಜೆ ಮಂಗಳೂರಿನ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ನೌಕೆಯೊಂದಿಗೆ ಸ್ಥಳಕ್ಕೆ ತೆರಳಿದರಾದರೂ ಹವಮಾನ ವೈಪರೀತ್ಯದಿಂದಾಗಿ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ.
ಶುಕ್ರವಾರ ಬೆಳಗ್ಗೆ ರೋಪ್ ಮೂಲಕ ಯಾಂತ್ರಿಕ ದೋಣಿಯ ಸಮೀಪ ಸಾಗಿ ಎಲ್ಲಾ ಮೀನುಗಾರರನ್ನ ರಕ್ಷಿಸಿದ್ದಾರೆ. ಇವರನ್ನು ಕಾರವಾರ ಇಲ್ಲವೇ ಮಂಗಳೂರು ತೀರಕ್ಕೆ ಕರೆತರಲಾಗುತ್ತದೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ