Info
Trending

ಹೊನ್ನಾವರ, ಕುಮಟಾದ ಇಂದಿನ ಕರೊನಾ ಮಾಹಿತಿ

  • ಕುಮಟಾ ತಾಲೂಕಿನ ಮುರೂರು, ಧಾರೇಶ್ವರ, ಹೆರವಟ್ಟಾ, ಗಂಗಾವಳಿ, ಸಿದ್ಧನಬಾವಿ ಸೇರಿ ಹಲವೆಡೆ ಪಾಸಿಟಿವ್
  • ಮಾವಿನಕುರ್ವಾ, ವಲ್ಕಿ, ಖರ್ವಾ, ಮುಗ್ವಾ, ಕಡತೋಕಾ, ಚಂದಾವರ, ನವಿಲಗೋಣ ಭಾಗದಲ್ಲಿ ಸೋಂಕು ಪತ್ತೆ
[sliders_pack id=”1487″]

ಹೊನ್ನಾವರ: ತಾಲೂಕಿನಲ್ಲಿ ಇಂದು ಏಳು ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಇಂದಿನ ಎಲ್ಲಾ ಪ್ರಕರಣಗಳು ಗ್ರಾಮೀಣ ಭಾಗದಲ್ಲಿಯೇ ಕಂಡುಬAದಿದೆ. ತಾಲೂಕಿನ ಮಾವಿನಕುರ್ವಾ-1, ವಲ್ಕಿ-1, ಖರ್ವಾ-1, ಮುಗ್ವಾ-1, ಕಡತೋಕಾ-1, ಚಂದಾವರ-1, ನವಿಲಗೋಣ-1 ಸೇರಿದಂತೆ ಒಟ್ಟು ಏಳು ಪ್ರಕರಣ ದಾಖಲಾಗಿದೆ.

ಮಾವಿನಕುರ್ವಾದ 39 ವರ್ಷದ ಪುರುಷ, ವಲ್ಕಿಯ 24 ವರ್ಷದ ಮಹಿಳೆ, ಖರ್ವಾದ 35 ವರ್ಷದ ಪುರುಷ, ಮುಗ್ವಾದ 32 ವರ್ಷದ ಯುವಕ, ಕಡತೋಕಾದ 42 ವರ್ಷದ ಮಹಿಳೆ, ಚಂದಾವರದ 55 ವರ್ಷದ ಮಹಿಳೆ, ನವಿಲಗೋಣದ 22 ವರ್ಷದ ಪುರುಷ ಸೇರಿದಂತೆ ಒಟ್ಟು ಏಳು ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಇಂದು ತಾಲೂಕಾ ಆಸ್ಪತ್ರೆಯಿಂದ ಇಬ್ಬರು ಡಿಸ್ಚಾರ್ಜ್ ಆಗಿದ್ದು, 25 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 178 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಏಳು ಕೇಸ್ ದೃಢಪಟ್ಟ ಬೆನ್ನಲ್ಲೆ, ತಾಲೂಕಿನಲ್ಲಿ ಒಟ್ಟು ಸೋಂಕಿತರ ಸಂಖೆ 603 ಕ್ಕೆ ಏರಿಕೆಯಾಗಿದೆ.

ಕುಮಟಾದಲ್ಲಿಂದು 10 ಕೇಸ್ ದೃಢ:

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಶುಕ್ರವಾರ 10 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಕುಮಟಾ ತಾಲೂಕಿನ ಮುರೂರು, ಧಾರೇಶ್ವರ, ಹೆರವಟ್ಟಾ, ಗಂಗಾವಳಿ, ಸಿದ್ಧನಬಾವಿ ಮುಂತಾದ ಭಾಗಗಳಲ್ಲಿ ಕರೋನಾ ಪ್ರಕರಣ ದಾಖಲಾಗಿದೆ.

ಧಾರೇಶ್ವರದ 38 ವರ್ಷದ ಮಹಿಳೆ, ಮೂರೂರಿನ 29 ವರ್ಷದ ಯುವಕ, ಹೆರವಟ್ಟಾದ 55 ವರ್ಷದ ಮಹಿಳೆ, ಗಂಗಾವಳಿಯ 64 ವರ್ಷದ ಪುರುಷ, ಕುಮಟಾ ಸಿದ್ಧನಬಾವಿಯ 60 ವರ್ಷದ ಪುರುಷ, ಕುಮಟಾ ಮಣಕಿ ಮೈದಾನ ಸಮೀಪದ 27 ವರ್ಷದ ಯುವಕ, ಕುಮಟಾದ 62 ವರ್ಷದ ಪುರುಷ, ಕುಮಟಾದ 60 ವರ್ಷದ ಮಹಿಳೆ, ಕುಮಟಾದ 40 ವರ್ಷದ ಪುರುಷ, ಕುಮಟಾದ 40 ವರ್ಷದ ಮಹಿಳೆಯಲ್ಲಿ ಕರೋನಾ ದೃಢಪಟ್ಟಿದೆ.

ಇಂದು 10 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 720 ರ ಗಡಿ ದಾಟಿದಂತಾಗಿದೆ.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ ಮತ್ತು ಯೋಗೇಶ್ ಮಡಿವಾಳ, ಕುಮಟಾ

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ, ಸುದ್ದಿಯನ್ನು ಶೇರ್ ಮಾಡಿ ಬೆಂಬಲಿಸಿ

Back to top button