Big News
Trending

ಜಿಲ್ಲೆಯಲ್ಲಿಂದು 145 ಕರೊನಾ ಕೇಸ್ ದಾಖಲು

ಕರೊನಾದಿಂದ‌ ಇಂದು ಐವರ ಸಾವು
143 ಮಂದಿ‌ ಗುಣಮುಖರಾಗಿ ಬಿಡುಗಡೆ
ಸೋಂಕಿತರ ಸಂಖ್ಯೆ 6687ಕ್ಕೆ ಏರಿಕೆ
ಅಂಕೋಲಾದಲ್ಲಿಂದು ಕೇಸ್ 3 : ಗುಣಮುಖ 5 : ಸಕ್ರೀಯ 87

[sliders_pack id=”3491″]

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 145 ಕರೊನಾ ಕೇಸ್ ದಾಖಲಾಗಿದೆ. ಕಾರವಾರ 21, ಅಂಕೋಲಾ 4, ಕುಮಟಾ 1, ಹೊನ್ನಾವರ 17, ಭಟ್ಕಳ 11, ಶಿರಸಿ 16, ಸಿದ್ದಾಪುರ 13, ಯಲ್ಲಾಪುರ 3, ಮುಂಡಗೋಡ 30, ಹಳಿಯಾಳ 19, ಜೋಯ್ಡಾದಲ್ಲಿ‌ 10 ಪ್ರಕರಣ ದೃಢಪಟ್ಟಿದೆ.

ಇದೇ ವೇಳೆ‌ ಇಂದು ವಿವಿಧ ಆಸ್ಪತ್ರೆಯಿಂದ 143 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರ 8, ಅಂಕೋಲಾ 34, ಭಟ್ಕಳ 22, ಹೊನ್ನಾವರ 5, ಶಿರಸಿ 6, ಸಿದ್ದಾಪುರ 12, ಯಲ್ಲಾಪುರ 12 ಸೇರಿದಂತೆ ವಿವಿಧೆಡೆಯಿಂದ‌ ಒಟ್ಟು 143 ಮಂದಿ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿಂದು ಐವರ ಸಾವು:

ಜಿಲ್ಲೆಯಲ್ಲಿಂದು ಒಟ್ಟು ಐವರು ಕರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಕುಮಟಾ 1, ಶಿರಸಿ 1,ಮತ್ತು ಯಲ್ಲಾಪುರ,‌ಮುಂಡಗೋಡ, ಹಳಿಯಾಳದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ‌ಸಂಖ್ಯೆ 79ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6687ಕ್ಕೆ ಏರಿಕೆಯಾಗಿದೆ. 813 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತಿದ್ದು, 1016 ಜನರಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ.

ಅಂಕೋಲಾದಲ್ಲಿಂದು ಕೇಸ್ 3 : ಗುಣಮುಖ 5 : ಸಕ್ರೀಯ 87

ಅಂಕೋಲಾ : ತಾಲೂಕಿನಲ್ಲಿ ಶುಕ್ರವಾರ 3 ಹೊಸ ಕೋವಿಡ್ ಕೇಸಗಳು ದಾಖಲಾಗಿವೆ ಎನ್ನಲಾಗಿದ್ದು, ಸೋಂಕು ಮುಕ್ತರಾದ 5 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಹೋಂ ಐಸೋಲೇಷನನಲ್ಲಿರುವ 47 ಜನರ ಸಹಿತ ಒಟ್ಟೂ 87 ಪ್ರಕರಣಗಳು ಸಕ್ರೀಯವಾಗಿದೆ. ಇಂದು 87 ಜನರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

ಇದನ್ನೂ ಓದಿ: ಇಂದಿನ ಪ್ರಮುಖ‌‌‌ ಸುದ್ದಿಗಳು

ಕೆಳಗಿನ ಸೋಷಿಯಲ್ ಲಿಂಕ್ ‌ಮೇಲೆ‌‌ ಕ್ಲಿಕ್ ಮಾಡಿ, ಸುದ್ದಿಯನ್ನು ಶೇರ್‌ಮಾಡಿ, ಬೆಂಬಲಿಸಿ

Back to top button