Focus News
Trending

ರಾಷ್ಟ್ರೀಯ ಮೆಗಾ ಲೋಕ ಅದಾಲತ್ ನಲ್ಲಿ 168 ಪ್ರಕರಣಗಳು ರಾಜೀ ಸಂಧಾನದಲ್ಲಿ ಇತ್ಯರ್ಥ: 3 ಕೋಟಿ 13 ಲಕ್ಷಕ್ಕೂ ಹೆಚ್ಚಿನ ಮೊತ್ತದ ಹಣ ವಸೂಲಿ

ಅಂಕೋಲಾ: ತಾಲೂಕಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಡಿ 14 ರ ಶನಿವಾರ ಯಶಸ್ವಿಯಾಗಿ ನಡೆಯಿತು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದ ಮೇರೆಗೆ ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ನಡೆಸಲಾಗಿತ್ತು.

ಸೀನಿಯರ ಸಿವಿಲ್ ವಿಭಾಗದಲ್ಲಿ 928, ಸಿವಿಲ್ ವಿಭಾಗದಲ್ಲಿ 1142, ಅಡಿಶನಲ್ ಸಿವಿಲ್ ವಿಭಾಗದಲ್ಲಿ 1155 ಹೀಗೆ ಒಟ್ಟೂ 3225 ಪ್ರಕರಣಗಳು ಬಾಕಿ ಇದ್ದವು. ಅವುಗಳಲ್ಲಿ ಸೀನಿಯರ ಸಿವಿಲ್ ವಿಭಾಗದಿಂದ ಕೈಗೆತ್ತಿಕೊಳ್ಳಲಾದ 112 ಪ್ರಕರಣಗಳಲ್ಲಿ 27 , ಸಿವಿಲ್ ವಿಭಾಗದ 108 ರಲ್ಲಿ 70, ಮತ್ತು ಅಡಿಶನಲ್ ಸಿವಿಲ್ ವಿಭಾಗದ 110 ರಲ್ಲಿ 71 ಪ್ರಕರಣಗಳನ್ನು ಇಂದು ಇತ್ಯರ್ಥಪಡಿಸಲಾಯಿತು. ಲೋಕ ಅದಾಲತನಲ್ಲಿ ಇಂದು ಒಟ್ಟೂ
330 ಪ್ರಕರಣಗಳಲ್ಲಿ ರೂ 31350281 ( 3ಕೋಟಿ 13 ಲಕ್ಷದ 50 ಸಾವಿರದ 281 ರೂಪಾಯಿಗಳು ಮಾತ್ರ ) ಒಟ್ಟೂ ಮೊತ್ತದ 168 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.

ಇದೇ ವೇಳೆ ರೂ 1249750 ರೂ ಒಟ್ಟೂ ಮೊತ್ತದ 34 ವ್ಯಾಜ್ಯ ಪೂರ್ವ ಪ್ರಕರಣಗಳನ್ನೂ ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು. ಕಾನೂನು ಸೇವಾ ಸಮಿತಿಯ ಹಿರಿ – ಕಿರಿಯ ಸದಸ್ಯರು, ವಕೀಲರು,ನ್ಯಾಯಾಲಯದ ಸಿಬ್ಬಂದಿಗಳು ಸಹಕರಿಸಿದರು. *ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ಮತ್ತು ಜೆ ಎಮ್ ಎಫ ಸಿ ನ್ಯಾಯಾಧೀಶರಾದ ಮನೋಹರ ಎಂ, ಸಿವಿಲ್ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಧೀಶರೂ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾವ ಅರ್ಪಿತಾ ಬೆಲ್ಲದ ನ್ಯಾಯಾಲಯದ ಕಲಾಪಗಳನ್ನು ನಿರ್ವಹಿಸಿದರು. ಲೋಕ ಅದಾಲತನ ಕಲಾಪಗಳಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯ ಪರವಾಗಿ ವಕೀಲರ ಸಂಘದ ಅಧ್ಯಕ್ಷ ದೀಕ್ಷಿತ್ ನಾಯಕ್ , ಮತ್ತು ನಿಕಟ ಪೂರ್ವ ಅಧ್ಯಕ್ಷರಾದ ವಿನೋದ ಶ್ಯಾನಭಾಗ ಸಂಧಾನಕಾರರಾಗಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button