Important
Trending

ತವರು ಮನೆಗೆ ಹೋದ ಹೆಂಡತಿ, ಮಗಳು ನಾಪತ್ತೆ: ದೂರಿನಲ್ಲಿ ಏನಿದೆ ನೋಡಿ?

ಕುಮಟಾ: ತಾಯಿಯ ಆರೋಗ್ಯ ವಿಚಾರಿಸಿಕೊಂಡು ಬರುತ್ತೇನೆಂದು ತನ್ನ 8 ವರ್ಷದ ಮಗಳೊಂದಿಗೆ ತವರು ಮನೆಗೆ ಹೋಗಿದ್ದ ಮಹಿಳೆ ನಾಪತ್ತೆಯಾಗಿರುವ ಘಟನೆ ಕುಮಟಾದಲ್ಲಿ ನಡೆದಿದೆ. ಹೊನ್ನಮ್ಮ ಮಹಾದೇವ ಬೋವಿ ಹಾಗೂ ಆಕೆಯ 8 ವರ್ಷದ ಮಗು ದೀಪ್ತಿ ನಾಪತ್ತೆಯಾದವರು ಎಂದು ತಿಳಿದುಬಂದಿದೆ. ಕುಮಟಾ ಪಟ್ಟಣದಲ್ಲಿ ವಾಸವಾಗಿದ್ದ ಮಹಿಳೆ ಹೊನ್ನಮ್ಮ ಸೊರಬಾದ ಆನವಟ್ಟಿಯಲ್ಲಿರುವ ತಾಯಿಗೆ ಮನೆಗೆ ತೆರಳಿದ್ದಳು. ಅನಾರೋಗ್ಯ ಇದ್ದ ಕಾರಣ ತಾಯಿಯನ್ನ ಮಾತನಾಡಿಸಿಕೊಂಡು ಬರಲು ಮಗಳು ದೀಪ್ತಿಯನ್ನು ಕರೆದುಕೊಂಡು ಕುಮಟಾದಿಂದ ಆನವಟ್ಟಿಗೆ ಹೋಗಿದ್ದಳು.

ಈ ವೇಳೆ ಒಂದು ದಿನ ಉಳಿದು ತಾಯಿ ಹಾಗೂ ತಮ್ಮನ ಬಳಿ ಗಂಡನ ಮನೆಗೆ ಕುಮಟಾಕ್ಕೆ ಹೋಗುವುದಾಗಿ ಹೇಳಿ ಅಲ್ಲಿಂದ ಹೊರಟಿದ್ದಾಳೆ. ಆದರೆ ಇದುವರೆಗೂ ಕುಮಟಾದಲ್ಲಿರುವ ಪತಿಯ ಮನೆಗೂ ಬಂದಿಲ್ಲ. ವಾಪಸ್ ತಾಯಿ ಮನೆಗೂ ಹೋಗದೇ ತಾಯಿ ಮಗಳು ಇಬ್ಬರೂ ನಾಪತ್ತೆಯಾಗಿದ್ದಾರೆ. ಆಕೆಯ ಬಳಿ ಇದ್ದ ಮೊಬೈಲ್ ಸಹ ಸ್ವೀಚ್ ಆಫ್ ಆಗಿದೆ. ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗದೇ ಇರುವ ಕಾರಣ ನಾಪತ್ತೆಯಾಗಿರುವ ಹೊನ್ನಮ್ಮಳ ಸಹೋದರ ಇದೀಗ ಸೊರಬಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗುರುತು ಸಿಕ್ಕರೆ ಮಾಹಿತಿ ನೀಡುವಂತೆ ಕೋರಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button